ಪ್ರಮುಖ ಸುದ್ದಿ
ನಾಡ ಕಚೇರಿಗೆ ಡಿಸಿ ದಿಡೀರ್ ಭೇಟಿ ಪರಿಶೀಲನೆ
ಕಂದಾಯ ಪ್ರಗತಿ ಪರಿಶೀಲನಾ ಸಭೆ ಕಡ್ಡಾಯ-ರಾಗಪ್ರಿಯಾ ಸೂಚನೆ
yadgiri, ಶಹಾಪುರಃ ತಾಲೂಕಿನ ದೋರನಹಳ್ಳಿ ಮತ್ತು ಗೋಗಿ (ಕೆ) ಗ್ರಾಮದ ನಾಡ ಕಚೇರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ದಿಡೀರ ಭೇಟಿ ನೀಡಿ ಕಂದಾಯ ಇಲಾಖೆಯ ಪ್ರಗತಿಯನ್ನು ಪರಿಶೀಲಿಸಿದರು.
3 ಮತ್ತು 9 ನೇ ಕಲಂ ಮಿಸ್ ಮ್ಯಾಚ್ ಪೈಕಿ ಪಹಣಿ, ಮೋಜನಿ ಕಡತಗಳು, ನವೋದಯ ಆಪ್ ಮತ್ತು ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಾಲ ಯೋಜನೆಗಳ ಪ್ರಗತಿಯ ಕುರಿತು ಮಾಹಿತಿ ಪಡೆದುಕೊಂಡರು.
ಪ್ರತಿ 15 ದಿವಸಕ್ಕೊಮ್ಮೆ ತಾಲೂಕು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯನ್ನು ಕಡ್ಡಾಯವಾಗಿ ಮಾಡಬೇಕು. ಪ್ರಗತಿ ಕುಂಠಿತವಾಗದಂತೆ ಎಚ್ಚರಿಕೆವಹಿಸಬೇಕು ಎಂದು ತಹಸೀಲ್ದಾರರಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪ್ರಶಾಂತ ಹನಗಂಡಿ, ಆರ್.ಸಿ.ಎಚ್.ಓ. ಡಾ.ಲಕ್ಷ್ಮೀಕಾಂತ ಒಂಟಿಪೀರ ಸೇರಿದಂತೆ ಶಹಾಪುರ ತಹಸೀಲ್ದಾರ ಮಧುರಾಜ್ ಇತರರಿದ್ದರು.