ಪ್ರಮುಖ ಸುದ್ದಿ
ಕಾಂಗ್ರೆಸ್ಸಿಗರಲ್ಲಿ ಇರುವ ಗಟ್ಟಿತನ ಬಿಜೆಪಿಯಲ್ಲಿ ಇಲ್ಲ – ಮುತಾಲಿಕ್ ವಾಗ್ದಾಳಿ

ಕಾಂಗ್ರೆಸ್ಸಿಗರಲ್ಲಿ ಇರುವ ಗಟ್ಟಿತನ ಬಿಜೆಪಿಯಲ್ಲಿ ಇಲ್ಲ – ಮುತಾಲಿಕ್ ವಾಗ್ದಾಳಿ
ಚಿಕ್ಕಮಗಳೂರಃ ಓಟಿನ ಆಸೆಗಾಗಿ ಬಿಜೆಪಿಯವರು ಸೆಕ್ಯೂಲರ್ ಆಗ ಹೊರಟಂತಿದೆ. ಬಿಜೆಪಿಯ ಶಾಸಕರು, ನಾಯಕರ ಪತ್ನಿಯರು ಬುರ್ಖಾ ಧರಿಸಿ ಮುಸ್ಲಿಂ ಬಡಾವಣೆಗೆ ಹೋಗಿ ಮತ ಕೇಳಿದರೂ ಇವರಿಗೆ ಒಂದ್ ಓಟ್ ಬೀಳಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿದ ಅವರು, ದೇವಸ್ಥಾನ ಕೆಡವಿದ್ದು, ಗಣೇಶ ಉತ್ಸಾಹ ಸಂದರ್ಭ ಬಿಜೆಪಿ ನಡೆದುಕೊಂಡಿರುವದು, ಮತ್ತು ದತ್ತ ಪೀಠ ವಿಚಾರದಲ್ಲಿ ಬಿಜೆಪಿ ನಡೆ ಕುರಿತು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರಲ್ಲಿರುವ ಗಟ್ಟಿತನ ಬಿಜೆಪಿಯಲ್ಲಿ ಉಳಿದಿಲ್ಲ.
ಸಿದ್ರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಇರೋದೆ ಮುಸ್ಲಿಂರಿಗಾಗಿ, ಕಾಂಗ್ರೆಸ್ಸಿಗರ ಮಕ್ಕಳು ಮೊಮ್ಮಕ್ಕಳು ಮುಂದೆ ಮುಸ್ಲಿಂ ಆಗ್ತಾರೆ ಎಂಬ ಅರಿವು ಅವರಿಗಿಲ್ಲ. ಬಿಜೆಪಿಯವರು ಹಿಂದೂಗಳ ಮತ ಪಡೆದು ಗೆಲುವು ಸಾಧಿಸಿದ್ದೀರಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದರು.