ಚುನಾವಣೆ ಗಿಮಿಕ್ಃ ದೇವರ ದರ್ಶನ ಪಡೆದ ಜಾರಕಿಹೊಳೆ
ಚುನಾವಣೆ ಗಿಮಿಕ್ಃ ದೇವಿ ದರ್ಶನ ಪಡೆದ ಜಾರಕಿಹೊಳೆ
ಶಿರಸಿಃ ಹಾನಗಲ್ ಉಪಚುನಾವಣೆ ಹಿನ್ನೆಲೆ ಪ್ರಚಾರದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷದ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ ಅವರು ದಸರಾ ಪ್ರಯುಕ್ತ ಸಮೀಪದ ಬನವಾಸಿಯ ಉಮಾಮಧುಕೇಶ್ವರ ದೇವಸ್ಥಾನಕ್ಕೆ ಅನಿರೀಕ್ಷಿತ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.
ಈ ಸಂದರ್ಭ ದೇವಸ್ಥಾನದ ಆಡಳಿತ ಮಂಡಳಿ ಜಾರಕಿಹೊಳಿ ಅವರನ್ನು ಸನ್ಮಾನಿಸಿ ಗೌರವಿಸಿತು.
ಪ್ರಗತಿಪರ ನಿಲುವು ಹೊಂದಿದ, ಪ್ರತಿ ವರ್ಷ ಸ್ಮಶಾನದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೂಢನಂಬಿಕೆ ವಿರುದ್ಧ ಮಾತನಾಡುವ ಮತ್ತು ಹಿಂದೂ ಧಾರ್ಮಿಕ ಕಾರ್ಯಗಳನ್ನು ಮೂಢ ನಂಬಿಕೆ ಎನ್ನುವ ಜಾರಕಿಹೊಳಿಯವರು ದೇವಸ್ಥಾನಕ್ಕೆ ಭೇಟಿ ನೀಡಿ ಬಂಗಾರೇಶ್ವರ ದೇವರ ದರ್ಶನ ಪಡೆದಿರುವದು ಆಶ್ಚರ್ಯ ಮೂಡಿಸಿದೆ.
ಇದೆಲ್ಲ ಚುನಾವಣೆ ನಿಮಿತ್ತ ರೂಪಕಗಳು ಎಂದು ವಿಪಕ್ಷಗಳು ಗುಡುಗುತ್ತಿವೆ ಎನ್ನಲಾಗಿದೆ. ಜಾರಕಿಹೊಳೆ ಜತೆಯಲ್ಲಿ ಮುಖಂಡರಾದ ರವಿ ನಾಯ್ಕ್ ಕಲಕರಡಿ, ಶಿವಾಜಿ, ಅಬ್ದುಲ್ ಕರಿಂ, ಮಧುಕೇಶ್ವರ ನಾಯಕ, ಆಸೀಫ್, ಅಲ್ತಾಫ್, ಮುದ್ದಣ್ಣ ಬನವಾಸಿ ಇತರರಿದ್ದರು. ಇದೇ ಸಂದರ್ಭದಲ್ಲಿ ಗುಡ್ನಾಪುರ ಕೆರೆ ವೀಕ್ಷಣೆ ಮಾಡಿದರು.