ಪ್ರಮುಖ ಸುದ್ದಿ
ಯಾದಗಿರಿ ಬ್ರಿಡ್ಜ್ ಮೇಲೆ ಬಂದ ಮೊಸಳೆ.? ಗಾಬರಿಗೊಂಡ ವಾಹನ ಸವಾರರು
ಯಾದಗಿರಿ ಬ್ರಿಡ್ಜ್ ಮೇಲೆ ಬಂದ ಮೊಸಳೆಃ ಗಾಬರಿಗೊಂಡ ವಾಹನ ಸವಾರರು
ಯಾದಗಿರಿಃ ನಗರದ ಶಹಾಪುರ ರಸ್ತೆಮಾರ್ಗ ಬರುವ ಭೀಮಾ ನದಿ ಸೆರುವೆ ಮೇಲೆ ಕತ್ತಲಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿದ್ದು ಕೆಲಹೊತ್ತು ವಾಹನ ಸವಾರರು ಜನರು ಆತಂಕಗೊಂಡಿದ್ದಾರೆ.
ಅಲ್ಲದೆ ಸವಾರರು ಅದನ್ನು ಓಡಿಸಲು ಪ್ರಯತ್ನಿಸುವ ವಿಡಿಯೋ ತುಣುಕೊಂದು ಸಖತ್ತಾಗಿ ಟ್ರೋಲ್ ಆಗಿದ್ದು. ಇದು ಯಾದಗಿರಿ ಬ್ರಿಡ್ಜ್ ಮೇಲೆ ಬಂದಿದ್ದೋ ಅಥವಾ ಬೇರೆ ಕಡೆಯ ವೀಡಿಯೋ ಎಂಬುದು ಪತ್ತೆ ಹಚ್ಚ ಬೇಕಿದೆ.
ಸದ್ಯ ಯಾದಗಿರಿ ಸೇತುವೆ ಮೇಲೆ ಬಂದ ಮೊಸಳೆ ಎಂದು ಎಲ್ಲಡೆ ಟ್ರೋಲ್ ಆಗಿದೆ. ವಾಹನಗಳ ಆರ್ಭಟ ಜನರ ಕಲರವ ಕೇಳಿ ಆತಂಕದಿಂದಲೇ ಅಲ್ಲಿಂದ ಕಾಲ್ಕಿತ್ತಲು ಮೊಸಳೆ ಯತ್ನಿಸುತ್ತಿರುವದು ವಿಡಿಯೋದಲ್ಲಿ ಕಾಣಬಹುದು.
ಈ ವಿಡಿಯೋ ಎಲ್ಲಡೆ ಪಸರಿಸುತ್ತಿದ್ದು, ಜನರು ಅದು ರಸ್ತೆ ದಾಟಿ ನದಿ ಕಡೆ ತೆರಳಿ ನೀರೊಳು ಹೋಗುವವರೆಗೆ ಬ್ಯಾಟರಿ, ವಾಹನಗಳ ಫೋಕಸ್ ಹಾಕಿ ಅದನ್ನು ನೀರಿಗೆ ಸೇರಿಸಲು ಪ್ರಯತ್ನಿಸಿದ್ದಾರೆ.