ಪ್ರಮುಖ ಸುದ್ದಿ
ಪ್ರಿಯಕರನ ಬಿಡಲು ಒಪ್ಪದ ಮಗಳನ್ನೇ ಕೊಂದ ತಂದೆ
![](https://vinayavani.com/wp-content/uploads/2021/10/Screenshot_20211029-120835_WhatsApp.jpg)
ಪ್ರಿಯಕರನ ಬಿಡಲು ಒಪ್ಪದ ಮಗಳನ್ನೇ ಕೊಂದ ತಂದೆ
ಚಿಕ್ಕಮಗಳೂರುಃ ಪ್ರೀತಿಸಿದ ಹುಡುಗನನ್ನ ಬಿಡಲು ಒಪ್ದದ ಮಗಳನ್ನು ತಂದೆಯೇ ಆಕೆಯ ವೇಲನ್ನೆ ಕೊರಳಿಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ ಘಟನೆ ಕಡೂರ ತಾಲೂಕಿನ ಬೀರೂರಿನಲ್ಲಿ ನಡೆದಿದೆ.
ರಾಧಾ (18) ಮೃತ ದುರ್ದೈವಿಯಾಗಿದ್ದು, ಆರೋಪಿ ರಾಧಾಳ ತಂದೆ ಚಂದ್ರಪ್ಪನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೆಂಚೇಗೌಡ ಕೊಪ್ಪಲಿನ ನಿವಾಸಿಗಳಾಗಿದ್ದು, ಬೀರೂರು ಠಾಣೆ ವ್ಯಾಪ್ತಿ ಘಟನೆ ನಡೆದಿದೆ ಎನ್ನಲಾಗಿದೆ.
ಮಗಳನ್ನ ಪರಿಪರಿಯಾಗಿ ಬೇಡಿದರು ಪ್ರಿಯಕರನ ಬಿಡಲು ಒಪ್ಪದ ಮಗಳನ್ನ ಫುಸಲಾಯಿಸಿ ಮಾರ್ಗಮಧ್ಯದಲ್ಲಿ ಕೊಲೆಗೈಯಲಾಗಿದೆ ಎಂದು ಹೇಳಲಾಗುತ್ತಿದೆ. ಪೊಲೀಸರ ತನಿಖೆ ಯಿಂದಲೇ ಸತ್ಯಾಸತ್ಯತೆ ಹೊರ ಬರಬೇಕಿದೆ.