ಕಥೆ

ಸೈತಾನನ ಪ್ರಬಲ ಅಸ್ತ್ರ ಯಾವುದು ಗೊತ್ತಾ.?

ಸೈತಾನನ ಪ್ರಬಲ ಅಸ್ತ್ರ

ಒಮ್ಮೆ ತನ್ನ ಕೆಟ್ಟ ಅಸ್ತ್ರಗಳ ಹಿಂಡನ್ನೇ ಕಿತ್ತೆಸೆಯಬೇಕೆಂದು ಸೈತಾನ ನಿರ್ಧರಿಸಿದ. ಆತ್ಮ ಪ್ರಶಂಸೆ, ಅಹಂಕಾರ, ಕಾಮ, ದ್ವೇಷ, ಕೋಪತಾಪ, ದುರಾಸೆ, ಒರಟುತನ, ಮತ್ಸರ, ಅಧಿಕಾರ ಲಾಲಸೆ… ಇವೆಲ್ಲವೂ ಸೈತಾನನ ಅಸ್ತ್ರಗಳೇ.

ಇವುಗಳಲ್ಲಿ ಎಲ್ಲವನ್ನೂ ಎಸೆದರೂ ‘ನಿರುತ್ಸಾಹ’ ಎಂಬ ಅಸ್ತ್ರ ಮಾತ್ರ ತುಂಬಾ ಸವೆದಿತ್ತು. ಅದನ್ನೇ ಜಾಸ್ತಿಯಾಗಿ ಆತ ಬಳಸಿದ್ದುದರಿಂದ ಈ ಅಸ್ತ್ರಕ್ಕೆ ಜಾಸ್ತಿ ಬೆಲೆ ಹೇಳ್ತಿನಿ ಎಂದೇ ನಿಶ್ಚಯಿಸಿದ.

ಯಾಕಿಷ್ಟು ಬೆಲೆ? ಎಂದು ಕೇಳಿದಾಗ,

ಉಳಿದ ಅಸ್ತ್ರಗಳೆಲ್ಲ ಕೆಲಸ ಮಾಡದೇ ಇದ್ದಾಗ ಇದನ್ನೇ ಸುಲಭದಿಂದ ಬಳಸುತ್ತೇನೆ. ಇದನ್ನು ಯಾರ ಮೇಲೆ ಪ್ರಯೋಗಿಸುತ್ತೇನೋ ಅವರು ಬದುಕಿನಲ್ಲಿ ಉತ್ಸಾಹ ಕಳೆದುಕೊಂಡು ಚಿಂತಾಕ್ರಾಂತರಾಗುತ್ತಾರೆ, ಅಧೈರ್ಯದಿಂದ ನನಗೇ ಶರಣಾಗುತ್ತಾರೆ. ಆ ಮೇಲೆ ನಾನು ಹೇಳಿದಂತೆ ಮಾಡುತ್ತಾರೆ, ಜೀವಂತ ಶವವಾಗಿಯೇ ಬಿದ್ದಿರುತ್ತಾರೆ.

“ಉತ್ಸಾಹವೇ ಜೀವನ, ನಿರುತ್ಸಾಹವೇ ಮರಣ! ಎಂಬ ಗಾದೆ ಮಾತನ್ನರಿತು ತ್ಯಾಗ ಹಾಗೂ ಸೇವೆಯ ಹೆದ್ದಾರಿಯಲ್ಲಿ ಅಡಿ ಇಟ್ಟುದೇ ಆದರೆ ಸೈತಾನನ ಆಟ ಎಂದೆಂದಿಗೂ ಎಳೆಯಷ್ಟು ನಡೆಯುವುದೇ ಇಲ್ಲ!

ನೀತಿ :– ನವೋತ್ಸಾಹ ಅಕ್ಷಯವಾಗಿ ನಿತ್ಯತೃಪ್ತಿ ನನಸಾಗಲು ನಿರಾಶೆ ಮಾಡದೆ ಗೆಲ್ಲುವು ಸಾಧಿಸಬೇಕು.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button