ಪ್ರಮುಖ ಸುದ್ದಿ

ಇವತ್ತು ನಾಳೆ ಭಾರಿ ಮಳೆ ಎಚ್ಚರಿಕೆ..! ಶಹಾಪುರ, ಸುರಪುರ, ಯಾದಗಿರಿ ಸಾಧಾರಣ ಮಳೆ

ಇವತ್ತು ನಾಳೆ ಭಾರಿ ಮಳೆ ಎಚ್ಚರಿಕೆ..!

ಬೆಂಗಳೂರಃ ಬೆಂಗಳೂರ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರಿ ಮೆಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.
ಶುಕ್ರವಾರ ರಾತ್ರಿ ವರುಣನ ಆರ್ಭಟದಿಂದ ಸಾಕಷ್ಟು ಅವಘಡಗಳು ಸಂಭವಿಸಿವೆ.
ಕಾಲುವೆಯೊಂದರಲ್ಲಿ ಅರುಣ್ ಎಂಬ ಯುವಕನ ಶವ ಪತ್ತೆಯಾಗಿದೆ. ಅಲ್ಲದೆ ನಗರದಲ್ಲಿ ಕಾಲುವೆ, ರಸ್ತೆಗಳು ತುಂಬಿ ಹರಿಯುತ್ತಿರುವದರಿಂದ ಸಾಕಷ್ಟು ಅವಘಡ ನಡೆದಿವೆ. ಮತ್ತು ಗಿಡ, ಮರಗಳು ನೆಲಕ್ಕೆ ಉರುಳಿದ್ದು, ಹಲವು ವಾಹನಗಳು ಜಖಂಗೊಂಡ ಘಟನೆ ನಡೆದಿವೆ.
ಹಲವು ಬಡಾವಣೆಗಳು ನೀರಿನಿಂದ ಅವೃತ್ತವಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಬಿಬಿಎಂಪಿ ಅಧಿಕಾರಿಗಳು ಸಿಬ್ಬಂದಿ ಹರಸಾಹಸ ಪಡುತ್ತಿದೆ. ಬೆಂಗಳೂರ ಮತ್ತು ಸುತ್ತಲಿನ ಜನತೆ ಇನ್ನೆರಡು ದಿನ ಎಚ್ಚರವಹಿಸಬೇಕಿದೆ. ಮಳೆ ಅವಾಂತರ ಕಳೆದ ವಾರದಿಂದ ರಾಜಧಾನಿ ತತ್ತರಿಸಿದೆ, ಸರ್ಕಾರದಿಂದ ಯಾವುದೇ ಮಿಂಚಿನ ಪರಿಹಾರ ಮಾತ್ರ ಕಂಡು ಬರುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ಹವಾಮಾನ ಇಲಾಖೆ ಇನ್ನೆರಡು ದಿನ ಭಾರಿ ಮಳೆಯಿದ್ದು, ಜನತೆ ಎಚ್ವರವಹಿಸಲು ಸೂಚಿಸಿದೆ.

ಯಾದಗಿರಿ ಜಿಲ್ಲೆಯಾದ್ಯಂತ ಸಾಧಾರಣ ಮಳೆ ನಿರೀಕ್ಷೆ

ಬೆಂಗಳೂರ ಸೇರಿದಂತೆ ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇಂದು ನಾಳೆ ಭಾರಿ ಮಳೆ ಬರುವ ಸಾಧ್ಯತೆ ವ್ಯಕ್ತಪಡಿಸಿದ ಹವಾಮಾನ ಇಲಾಖೆ, ಯಾದಗಿರಿ ಜಿಲ್ಲೆಯಲ್ಲಿ ಇವತ್ತು ಮತ್ತು ನಾಳೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗೋಗಿ, ಸಗರ ಮತ್ತು ದೋರನಹಳ್ಳಿ ಹೋಬಳಿಯಲ್ಲೂ ಇನ್ನೆರಡು ದಿನ ಸಾಧಾರಣ ಮಳೆ ಸಂಭವ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button