Home
“ಹೃದಯಗಳ ನಡುವೆ ಸಂಘರ್ಷ” ಯುವ ಕವಿ ಶಾಂತು ತೋಟಗೇರ ರಚಿತ ಕಾವ್ಯ
ಒಲವಿನ ಸೆಳೆತಕೆ
ಒಲವಿನ ಸೆಳತಕೆ
ಹೃದಯವು ಮಾಗಿದೆ
ಪ್ರೇಮದ ಭಾವಕೆ
ಲೋಕವೇ ಬಾಗಿದೆ
ನೂರಾರು
ಕೋರಿಕೆಗಳು
ಭಾವಾಂತರಂಗದಿ
ನೆರವೇರಿಸಲದು
ಕಡಲ ಮುಗಿಲೆತ್ತರ
ತರಂಗೋಪಾದಿ
ಒಲವಿನ ಸೆಳೆವು
ಪ್ರೇಮಕೆ ಹೊಸತಲ್ಲ
ಗೆಲುವಿರದ ಹೃದಯ
ಸೋಲಿಗೆ ಸೋಲಲ್ಲ
ಪ್ರೀತಿಯ ಸ್ಪರ್ಶ
ದೇಹಕಲ್ಲ
ಮನಸಿನ ಉತ್ಕರ್ಷ
ಮೋಹಕಲ್ಲ
ಹೃದಯಗಳ ಸಂಘರ್ಷ
ಗೆಲುವಿಗಲ್ಲ…..