ಪರಿಷತ್ ಫೈಟ್ಃ ಬಿಜೆಪಿಗೆ ಬಹುಮತ, ಯಾವ ಪಕ್ಷದ ಬಲಾಬಲವೆಷ್ಟು.?
ಪರಿಷತ್ ಫೈಟ್ಃ ಬಿಜೆಪಿಗೆ ಬಹುಮತ, ಯಾವ ಪಕ್ಷದ ಬಲಾಬಲವೆಷ್ಟು.?
ವಿವಿ ಡೆಸ್ಕ್ಃ ವಿಧಾನ ಪರಿಷತ್ ಚುನಾವಣೆಯ 25 ಸ್ಥಾನಗಳಲ್ಲಿ ಮೂರು ಪಕ್ಷಗಳೂ ತಮ್ಮ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಜಿದ್ದಾಜಿದ್ದಿನ ಫೈಟ್ ನಡೆಸಿದ್ದವು. ಅಂತಿಮವಾಗಿ ಇಂದು 25 ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ.
ಒಟ್ಟು 75 ಸದಸ್ಯ ಬಲದ ಮೇಲ್ಮನೆಯಲ್ಲಿ 38 ಮ್ಯಾಜಿಕ್ ನಂಬರ್ ಆಗಿದೆ. ಇಂದಿನ ಫಲಿತಾಂಶದ ಬಳಿಕ ಬಿಜೆಪಿ ನಿರ್ದಿಷ್ಟವಾಗಿ 38 ಮ್ಯಾಜಿಕ್ ಸ್ಥಾನಗಳನ್ನು ಪಡೆದುಕೊಂಡಿದೆ.
25 ಸ್ಥಾನಗಳಿಗೆ ನಡೆದ ಹಣಾಹಣಿಯಲ್ಲಿ ಬಿಜೆಪಿ 12, ಕಾಂಗ್ರೆಸ್ 11 ಮತ್ತು ಜೆಡಿಎಸ್ 1 ಸ್ಥಾನವನ್ನು ಗೆದ್ದುಕೊಂಡಿದೆ.
ಹಿಂದೆ 29 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಅದರಲ್ಲಿ 14 ಜನ ಸದಸ್ಯರು ಚುನಾವಣೆ ಎದುರಿಸಿದ್ದರು. ಇದೀಗ ಅದರಲ್ಲಿ 11 ಮಂದಿ ಮಾತ್ರ ಗೆಲುವು ಸಾಧಿಸಿದ್ದಾರೆ.
ಅಂದರೆ ಕಾಂಗ್ರೆಸ್ 3 ಸ್ಥಾನಗಳನ್ನು ಕಳೆದುಕೊಂಡಂತಾಗಿದೆ. ಹೀಗಾಗಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲಾಬಲ 26 ಕ್ಕೆ ಇಳಿದಿದೆ.
ಇನ್ನೂ 12 ಸದಸ್ಯರನ್ನು ಹೊಂದಿದ್ದ ಜೆಡಿಎಸ್ ನಿಂದ ನಾಲ್ಕು ಜನ ಚುನಾವಣೆ ಕಣದಲ್ಲಿದ್ದರು. ಅದರಲ್ಲಿ ಕೇವಲ 1 ಸ್ಥಾನದಲ್ಲಿ ಗೆಲುವು ಸಾಧಿಸುವ ಮೂಲಕ ಈ ಹಿಂದೆ ಮೇಲ್ಮನೆಯಲ್ಲಿದ್ದ 12 ಜೆಡಿಎಸ್ ಸದಸ್ಯರ ಬಲಾಬಲ ಇದೀಗ 9 ಕ್ಕೆ ಇಳಿಕೆಯಾಗಿದೆ.
ಒಟ್ಟು ಆಯಾ ಪಕ್ಷಗಳ ಬಲಾಬಲ ಇಂತಿದೆ.
ಬಿಜೆಪಿ – 38, ಕಾಂಗ್ರೆಸ್ – 26, ಜೆಡಿಎಸ್ – 9, ಪಕ್ಷೇತರ – 1, ಸ್ಪೀಕರ್ – 1 .
–ಮಲ್ಲಿಕಾರ್ಜುನ ಮುದನೂರ.