ಪ್ರಮುಖ ಸುದ್ದಿ
ಶಹಾಪುರಃ ಸಗರ ಮಾರುತಿ ಮುತ್ಯಾ ಇನ್ನಿಲ್ಲ
ಸಗರ ಮಾರುತಿ ಮುತ್ಯಾ ಇನ್ನಿಲ್ಲ..ದುಖಃದಲ್ಲಿ ಭಕ್ತ ಸಮೂಹ
ಇಹಲೋಕ ತ್ಯೇಜಿಸಿದ ಸಗರ ಮಾರುತಿ ಮುತ್ಯಾ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಮಾರುತಿ ಮುತ್ಯಾ ಎಂದೇ ಖ್ಯಾತಿ ಹೊಂದಿದ್ದ ಗ್ರಾಮದ ಭಾಗಮ್ಮದೇವಿ ದೇವಸ್ಥಾನದ ಮುಖ್ಯಸ್ಥ ಮಾರುತಿ ಮುತ್ಯಾ ಇನ್ನಿಲ್ಲ. ಅವರಿಗೆ 85 ವಯಸ್ಸಾಗಿತ್ತು.
ಅವರು ಕೆಲ ದಿನಗಳಿಂದ ಅನಾರೋಗಕ್ಕೆ ಈಡಾಗಿದ್ದರು.. ರಾಯಚೂರ ವಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಂತರ ಸ್ವಲ್ಪ ಗುಣಮುಖರಾಗಿ ಸ್ವಗ್ರಾಕ್ಕೆ ಆಗಮಿಸಿದ್ದ ಅವರಿಗೆ ಮತ್ತೆ ಅನಾರೋಗ್ಯದ ತೊಳಲಾಟ ಮುಂದುವರೆದಿತ್ತು.
ಕಾರಣ ಹೆಚ್ಚಿನ ಚಿಕಿತ್ಸೆಗೆ ಗಾಗಿ ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ದುರದೃಷ್ಟವಶಾತ್ ಇಹಲೋಕ ತ್ಯೇಜಿಸಿದರು.
ಅವರು ಎರಡು ಗಂಡು ಮತ್ತು ಎರಡು ಎರಡು ಹೆಣ್ಣುಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ, ಭಕ್ತ ಸಮೂಹವನ್ನು ಅಗಲಿದ್ದಾರೆ. ಬುಧವಾರ 15-12-2021 ಸಂಜೆ 4 ಗಂಟೆಗೆ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅಪಾರ ಭಕ್ತ ಸಮೂಹ ಕಂಬನಿ ಮಿಡಿದಿದ್ದಾರೆ.