ಸಿದ್ರಾಮಯ್ಯ ನವರ ಕಾಲದಲ್ಲಿಯೇ ಮತಾಂತರ ಕಾಯ್ದೆ ಜಾರಿಗೆ ಸೂಚನೆ, ದಾಖಲೆ ಸಮೇತ ಬಿಜೆಪಿ ಕಿಡಿ
ಸಿದ್ರಾಮಯ್ಯ ನವರ ಕಾಲದಲ್ಲಿಯೇ ಮತಾಂತರ ಕಾಯ್ದೆ ಜಾರಿಗೆ ಸೂಚನೆ, ದಾಖಲೆ ಸಮೇತ ಬಿಜೆಪಿ ಕಿಡಿ
ಕಾಂಗ್ರೆಸ್ ಬಣ್ಣ ಬಟಾ ಬಯಲು ಮಾಡಿದ ಬಿಜೆಪಿ
ಸುವರ್ಣಸೌಧಃ ಮತಾಂತರ ನಿಷೇಧ ಮಸೂದೆ ಜಾತಿಗೆ ಸಿದ್ರಾಮಯ್ಯ ಸಿಎಂ ಇದ್ದಾಗಲೇ ಸ್ವತಃ ಅವರೇ ಕಾನೂನು ಆಯೋಗಕ್ಕೆ ಸೂಚನೆ ನೀಡಿದ್ದರು ಆದರೆ ಅದೇ ಸಿದ್ರಾಮಯ್ಯ ಈಗ ಮತಾಂತರ ನಿಷೇಧ ಕಾಯ್ದೆ ವಿರೋಧಿಸುತ್ತಿರುವದು ವಿಪರ್ಯಾಸವೆಂದು ಬಿಜೆಪಿ ಸದನದಲ್ಲಿ ಹೇಳುತ್ತಿದೆ.
ಕಾನೂನು ಸಚಿವ ಮಾಧುಸ್ವಾಮಿ, ಅವರು ಹಿಂದೆ ಸಿದ್ರಾಮಯ್ಯ ನವರು ಕಾಲದಲ್ಲಿ 2016 ರಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಕಾನೂನು ಆಯೋಗಕ್ಕೆ ಸೂಚನೆ ನೀಡಿರುವ ದಾಖಲೆಗಳನ್ನು ಸ್ಪೀಕರ ಅವರ ಗಮನಕ್ಕೆ ತಂದರು.
ಸ್ಪೀಕರ್ ಕಾಗೇರಿ ಅವರು ಸಿದ್ರಾಮಯ್ಯ ನವರು ಮತಾಂತರ ನಿಷೇಧ ಕಾಯ್ದೆಯನ್ನ ಸಂಪುಟ ಮುಂದೆ ತಂದವರು ನೀವೇ ಇದೀಗ ಪಾಸ್ ಮಾಡಲು ಸಹಕರಿಸಿ ಇದರಲ್ಲಿ ನಿಮ್ಮ ಸಹಿ ಇದೆ ಎಂದು ಪ್ರದರ್ಶಿಸಿದರು.
ಮಾಜಿ ಸಿಎಂ ಯಡಿಯೂರಪ್ಪನವರು, ಸಿದ್ರಾಮಯ್ಯ ನವರೇ ತಂದ ಬಿಲ್ ಇದು. ನೀವೆ ಅನುಮೋದನೆ ಮಾಡಿರುವದು ನೀವೆ ಸಹಿ ಹಾಕಿರುವದು ಇದು. ನೀವೇ ಒಪ್ಕೊಳ್ಳುವದಿಲ್ಲ ಅಂದ್ರೆ ನೀವು ಅಪಹಾಸ್ಯಕ್ಕೆ ಈಡಾಗ್ತೀರಾ.
ದಾಖಲೆ ನೋಡಿ ಅದನ್ನು ಸಿದ್ರಾಮಯ್ಯ ನವರೇ ಸಮಾಜ ಕಲ್ಯಾಣ ಸಚಿವರಿಗೆ ಬರೆದ ದಾಖಲೆ ಇದೆ. ಅದರಲ್ಲಿ ಏನ್ ಬರೆದಿದೆ ಎಂಬುದನ್ನು ಸ್ಪೀಕರ್ ಅವರು ಓದಿ ಸ್ಪಷ್ಟ ಪಡಿಸಿದ್ದಾರೆ. ಕೂಡಲೇ ಹೆಚ್ಚಿನ ಸಮಯ ಚರ್ಚೆಗೆ ತೆಗೆದುಕೊಳ್ಳದೆ ಅದನ್ನು ಒಪ್ಕೊಂಡು ಸಹಕರಿಸಿ ಎಂದರು.
ಸದನದಲ್ಲಿ ಆಡಳಿತ ಸದಸ್ಯರು ಮತ್ತು ವಿಪಕ್ಷ ಸದಸ್ಯರ ನಡುವೆ ಗದ್ದಲ, ಕೂಗು ಜೋರಾಗಿ ಕೇಳಿ ಬರುತ್ತಿದೆ.