ನ್ಯಾಯ ಬೇಡ ಚಿನ್ನದ ನಾಣ್ಯವೇ ಬೇಕೆಂದ ಬೀರಬಲ್ ಯಾಕೆ ಗೊತ್ತಾ.? ಓದಿ
ದಿನಕ್ಕೊಂದು ಕಥೆ
ಮೂರ್ಖರನ್ನು ಮಾಡಲು ಹೋದವರೇ ಮೂರ್ಖರಾದರೂ..
ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಿದ್ದ. ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟಕಟ್ಟಲು ನಿರ್ಧರಿಸಿದರು.
ಒಮ್ಮೆ ಬೀರಬಲ್ ಸಭೆಗೆ ಬಂದಾಗ ರಾಜ ಅಕ್ಬರ್ ಎಲ್ಲರ ಸಲಹೆಯಂತೆ ‘ಬೀರಬಲ್ ನಿನಗೆ ನ್ಯಾಯಬೇಕೋ ಅಥವಾ ಚಿನ್ನದ ನಾಣ್ಯ ಬೇಕೋ’ ಎಂದು ಕೇಳಿದರು..
ಆಗ ಬೀರಬಲ್ ‘ನನಗೆ ನಾಣ್ಯ ಬೇಕು’ ಎಂದು ಹೇಳಿದ.. ಅಕ್ಬರನಿಗೆ ಈ ಮಾತು ಕೇಳಿ ಬೇಸರವಾಯ್ತು.. ‘ಬೀರಬಲ್ ನೀನು ಹಣದಾಸೆಗೆ ಮಾರುಹೋಗುವವನಲ್ಲ. ನ್ಯಾಯಕ್ಕಾಗಿ ಶ್ರಮಿಸುವ ನ್ಯಾಯವಂತ ಎಂದುಕೊಂಡಿದ್ದೆ..
ಆದರೆ ನೀನು ನನಗೆ ನಿರಾಸೆಮಾಡಿದೆ.. “ನಮ್ಮ ರಾಜ್ಯದಲ್ಲಿ ನ್ಯಾಯ ನೆಲೆಸುವಂತೆ ಮಾಡುತ್ತೀಯ ಎಂದುಕೊಂಡಿದ್ದೆ.. ಆದರೆ ನೀನು ಆ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದರು ಅಕ್ಬರ್.
ಅದಕ್ಕೆ ಬೀರಬಲ್ ‘ಸ್ವಾಮಿ ಯಾರಲ್ಲಿ ಏನಿಲ್ಲವೋ ಅದನ್ನೇ ಬಯಸುತ್ತಾರೆ, ನನಗೆ ನಿಮ್ಮ ರಾಜ್ಯದಲ್ಲಿ ನ್ಯಾಯ ಸಿಕ್ಕಿದ್ದೆ, ನ್ಯಾಯ ತುಂಬಿ ತುಳುಕುತ್ತಿರುವಾಗ ಮತ್ತೆ ನ್ಯಾಯ ಬೇಕು ಎಂದು ಕೇಳುವುದು ಮೂರ್ಖತನವಲ್ಲವೇ..??
ಅದಕ್ಕೆ ನಾನು ನಾಣ್ಯ ಕೇಳಿದೆ’ ಎಂದು ಉತ್ತರಿಸಿದ. ಅಕ್ಬರನಿಗೆ ಬೀರಬಲ್ಲನ ಮಾತು ಕೇಳಿ ಸಮಾಧಾನವಾಯ್ತು.. ಆಸ್ಥಾನಿಕರಿಗೆ ಬೀರಬಲ್ಲನನ್ನು ಪರೀಕ್ಷಿಸಿದ್ದಕ್ಕಾಗಿ ನಾಚಿಕೆಯಾಯಿತು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.