ಕಥೆ
ಕಷ್ಟ ಬಂದಾಗ ಮೈಕೊಡವಿ ಎದ್ದೇಳಿ.! ಈ ಅದ್ಭುತ ಕಥೆ ಓದಿ
ದಿನಕ್ಕೊಂದು ಕಥೆ
ಹೊಂಡಕ್ಕೆ ಬಿದ್ದ ಕತ್ತೆ
ಒಮ್ಮೆ ಒಬ್ಬನ ಅತ್ಯಂತ ಪ್ರೀತಿಪಾತ್ರ ಕತ್ತೆಯೊಂದು ದೊಡ್ಡ ಹೊಂಡವೊಂದಕ್ಕೆ ಬಿತ್ತು. ಆತ ಎಷ್ಟೇ ಪ್ರಯತ್ನ ಪಟ್ಟರೂ ಎತ್ತಲಾಗಲಿಲ್ಲವಾದ್ದರಿಂದ ಕತ್ತೆಯನ್ನು ಅಲ್ಲೇ ಜೀವಂತ ಹೂಳಲು ನಿರ್ಧರಿಸಿದ. ಸುತ್ತಲೂ ಇದ್ದ ಮಣ್ಣನ್ನು ಕೆತ್ತಿ ಕೆತ್ತಿ ತಂದು ಕತ್ತೆಯ ಮೇಲೆ ಹಾಕತೊಡಗಿದ.
ಬೆನ್ನಿಗೆ ಭಾರವಾದಂತೆನಿಸಿ ಕತ್ತೆ ಮಣ್ಣನ್ನು ಕೊಡಕಿತು. ಮತ್ತು ಕಳಗೆ ಬಿದ್ದ ಮಣ್ಣಿನ ಮೇಲೆ ಹತ್ತಿ ನಿಂತಿತು. ಸಂಜೆಯವರೆಗೆ ಇದೇ ಚಿತ್ರಣ ಮತ್ತೆ ಮತ್ತೆ ನಡೆಯಿತು. ಕೊನೆಗೆ ಕತ್ತೆ ಎಷ್ಟು ಮೇಲೆ ಬಂತೆಂದರೆ ಅದು ಸುತ್ತಲೂ ಬೆಳೆದಿರುವ ಹುಲ್ಲನ್ನು ಮೇಯತೊಡಗಿತು.
ನೀತಿ :– ಕಷ್ಟಗಳು ಬಂದಾಗ ನಾವೂ ಒಮ್ಮೆ ಕೊಡವಿ, ಒಂದೊಂದೇ ಹೆಜ್ಜೆ ಮೇಲೇರಲು ಯತ್ನಿಸೋಣವಲ್ಲವೇ ?
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.