ಪ್ರಮುಖ ಸುದ್ದಿ
ಶಹಾಪುರಃ ನಿವೇಶನ ಹಂಚಿಕೆ ಮುಂದೂಡಿಕೆ
ಶಹಾಪುರಃ ನಿವೇಶನ ಹಂಚಿಕೆ ಮುಂದೂಡಿಕೆ
Yadgiri, ಶಹಾಪುರಃ ನಗರ ವ್ಯಾಪ್ತಿಯಲ್ಲಿ ಬರುವ ವಾಜಪೇಯಿ ವಸತಿ ನಿವೇಶನ ಯೋಜನೆಯಡಿ ನಗರದಲ್ಲಿ ಖಾಲಿ ಇರುವ ನಿವೇಶನಗಳನ್ನು ಅರ್ಹ ಫಲಾನುಭವಿಗಳಿಗೆ ಜನೇವರಿ 26 ರಂದು ಲಾಟರಿ ಮೂಲಕ ಹಂಚಿಕೆ ಮಾಡಲಾಗುವದು ಎಂದು ಶಾಸಕರು ಪ್ರಕಟಣೆಯಲ್ಲಿ ಈ ಮೊದಲು ತಿಳಿಸಿದ್ದರು.
ಆದರೆ ಕಚೇರಿ ಆಡಳಿತಾತ್ಮಕ ಕಾರಣಗಳಿಂದಾಗಿ ನಿವೇಶನ ಹಂಚಿಕೆ ಮುಂದೂಡಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬಿಜೆಪಿ ನಗರ ಸಭೆ ಸದಸ್ಯರು, ಪದಾಧಿಕಾರಿಗಳು ಲಾಟರಿ ಮೂಲಕ ನಿವೇಶನ ಹಂಚಿಕೆ ತಡೆಗೆ ಈಚೆಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿರುವದನ್ನು ಇಲ್ಲಿ ಸ್ಮರಿಸಬಹುದು.
ನಿವೇಶನ ಹಂಚಿಕೆ ಮೊದಲು ನಿವೇಶನದ ಬೇಡಿಕೆಗೆ ಸಲ್ಲಿಸಿದ ಒಟ್ಟು ಅರ್ಜಿಗಳೆಷ್ಟು.? ತಿರಸ್ಕೃತ ಅರ್ಜಿಗಳೆಷ್ಟು.? ಯಾವ್ಯಾವ ವಾರ್ಡಿಂದ ಎಷ್ಟು ಅರ್ಜಿಗಳು ಬಂದಿವೆ. ಅದರಲ್ಲಿ ಅರ್ಹರೆಷ್ಟು.? ಎಂಬ ಇತ್ಯಾದಿ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಕೇಳಿದ್ದರು.