Home
ಹಿಜಾಬ್ ವಿಚಾರದಿಂದ ಕಾಂಗ್ರೆಸ್ ಸರ್ವನಾಶ – ಈಶ್ವರಪ್ಪ
ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶ – ಈಶ್ವರಪ್ಪ
ಮೈಸೂರಃ ಉಡುಪಿ ಯಿಂದಲೇ ಕಾಂಗ್ರೆಸ್ ಹಿಂದೆ ಗೋಹತ್ಯೆ ನಿಷೇಧ ಕಾಯ್ದೆ ವಿರೋಧಿಸಿ ಹೋರಾಟಕ್ಕೆ ಇಳಿದು ವಿಪಕ್ಷ ನಾಯಕ ಸಿದ್ರಾಮಯ್ಯ ಅಂದು ಅಧಿಕಾರ ಕಳೆದುಕೊಂಡರು, ಈಗ ಇದೆ ಉಡುಪಿಯಿಂದ ಹಿಜಾಬ್ ವಿವಾದ ಆರಂಭವಾಗಿದೆ.
ಮೊದಲ ಬಾರಿಗೆ 6 ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗೆ ಹೋದಾಗಲೇ ಕಾಂಗ್ರೆಸ್ ನವರು ಸಮಸ್ಯೆ ಬಗೆಹರಿಸಬಹುದಿತ್ತು. ಶಿಕ್ಷಣ ಕಲಿಲಿಕ್ಕೆ ನೀವು ಹೋಗೋದು ಧಾರ್ಮಿಕ ಆಚರಣೆಗಲ್ಲ ಸಮವಸ್ತ್ರ ಸಂಹಿತೆ ಪ್ರಕಾರ ನಡೆದುಕೊಳ್ಳಬೇಕೆಂದು ಹೇಳಿದ್ರೆ ಸಮಸ್ಯೆ ಬಗೆಹರಿಯುತ್ತಿತ್ತು.
ಅದು ಬಿಟ್ಟು ಕಾಂಗ್ರೆಸ್ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ. ಮತೀಯ ಸಂಘಟನೆಗಳು ವಿದ್ಯಾರ್ಥಿನಿಯರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಈ ವಿವಾದದ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಇದರಿಂದ ಓಟ್ ಬ್ಯಾಂಕ್ ರಾಜಕಾರಣ ಮಾಡಲು ಹೊರಟಿದೆ ಎಂದು ಹರಿಹಾಯ್ದರು.