ಪ್ರಮುಖ ಸುದ್ದಿ
ಯಾದಗಿರಿಃ ಇಸ್ಪೀಟು ಅಡ್ಡೆ ಮೇಲೆ ಪೋಲೀಸ್ ದಾಳಿ 10 ಜನರ ಬಂಧನ
ಸುರಪುರದ ರುಕ್ಮಾಪುರದಲ್ಲಿ ಜೂಜು ಅಡ್ಡೆ ಮೇಲೆ ದಾಳಿ
ಯಾದಗಿರಿಃ ಜಿಲ್ಲೆಯ ಸುರಪುರ ತಾಲೂಕಿನ ರುಕ್ಮಾಪುರ ಗ್ರಾಮದ ಹೊರ ವಲಯದಲ್ಲಿ ಇಸ್ಪೀಟ್ ಹಣ ಪಣಕ್ಕಿಟ್ಟು ಜೂಜಾಟವಾ ಆಡುತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಎಸ್ಪಿ ಶಿವಪ್ರಕಾಶ್ ನೇತೃತ್ವದ ಪೊಲೀಸರ ತಂಡ ರವಿವಾರ ರಾತ್ರಿ ಜೂಜುಅಡ್ಡೆ ಮೇಲೆ ದಿಢೀರನೆ ದಾಳಿ ನಡೆಸಿದೆ. ದಾಳಿ ವೇಳೆ ಜೂಜಾಟದಲ್ಲಿ ತೊಡಗಿದ್ದ ಹತ್ತು ಜನ ಜೂಜುಕೋರರನ್ನು ಬಂಧಿಸಲಾಗಿದೆ.
ಬಂಧಿತರಿಂದ ಏಳು ಸಾವಿರ ರೂಪಾಯಿ ನಗದು ಮತ್ತು ಮೂರು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಸುರಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.