ಈ ಕಿವುಡರ ಸಂಸಾರದಂತಾಗಿದೆ ಜಗತ್ತು.! ಓದಿ ತಿಳಿ ನಕ್ಕು ಬಿಡಿ
ಕಿವುಡರ ಸಂಸಾರ
ರಾಮಾಪುರ ಎಂಬ ಗ್ರಾಮದಲ್ಲಿ ಧನಂಜಯನೆಂಬ ಸಾಹುಕಾರನಿದ್ದನು. ಈತನಿಗೆ ರಾಗಿಣಿ ಎಂಬುವಳು ಹೆಂಡತಿ ಮತ್ತು ಶೃತಿ ಎಂಬ ಮಗಳು ಇರುತ್ತಾರೆ. ಈ ಸಂಸಾರಕ್ಕೆ ರತ್ನಮ್ಮ ಎಂಬ ಕೆಲಸದವಳು ಇರುತ್ತಾಳೆ.
ಮನೆಯ ಯಜಮಾನ, ಹೆಂಡತಿ, ಮಗಳು ಮತ್ತು ಕೆಲಸದವಳೂ ಸೇರಿ ಎಲ್ಲರೂ ಕಿವುಡರು.
ಒಂದು ದಿನ ಧನಂಜಯ ಮನೆಯ ಬಾಗಿಲಲ್ಲಿ ನಿಂತಿರುತ್ತಾನೆ. ಆಗ ಊರಿನ ಪಟೇಲರು ಆ ದಾರಿಯಲ್ಲಿ ಹೋಗುತ್ತಿದ್ದವರು, ಧನಂಜಯನನ್ನು ಕುರಿತು ಏನು ಸಾಹುಕಾರರೇ ಊಟ ಆಯಿತೆ ಎಂದು ಕೇಳುತ್ತಾನೆ. ಅದಕ್ಕೆ ಧನಂಜಯನು ಮನೆಗೆ ಎರಡು ಲಕ್ಷ ಆಯಿತು ಎನ್ನುತ್ತಾನೆ. ಪಟೇಲರು ಕಿವುಡು ಎಂದು ಕೊಂಡು ಹೋಗುತ್ತಾರೆ.
ಧನಂಜಯನು ಹೆಂಡತಿಯ ಹತ್ತಿರ ಹೋಗಿ ನೋಡೇ ಪಟೇಲರು ಮನೆಗೆ ಎಷ್ಟಾಯಿತು ಎಂದ್ರು, ನಾನು ಎರಡು ಲಕ್ಷ ಆಯಿತು ಎಂದೆ ಎಂದು ಹೇಳುತ್ತಾನೆ. ಅದಕ್ಕೆ ಹೆಂಡತಿಯು ಹೊಸಸೀರೆನಾದರೂ ಕೊಡಿಸಿ ಇಲ್ಲ, ಹಳೇ ಸೀರೆನಾದರೂ ಕೊಡಿಸಿ ನಾನೇನು ಬೇಡ ಅಂದೆನೆ ಎನ್ನುತ್ತಾಳೆ.
ಅವಳು ಮಗಳ ಹತ್ತಿರ ಹೋಗಿ ನೋಡಮ್ಮ ನಿಮ್ಮಪ್ಪ ಹಳೇಸೀರೆ ಕೊಡಿಸಲೋ ಹೊಸಸೀರೆ ಕೊಡಿಸಲೋ ಅಂದರು, ನಾನು ಯಾವುದಾದರೂ ಕೊಡಿಸಿ ಎಂದೆ ಎನ್ನುತ್ತಾಳೆ. ಅದಕ್ಕೆ ಮಗಳು ಹುಡುಗನಿಗಾದರೂ ಕೊಡಿ ಅಥವಾ ಮುದುಕನಿಗಾದರೂ ಕೊಡಿ ನಾನು ಆಗಲ್ಲ ಅನ್ನುತ್ತೀನೆ ಎನ್ನುತ್ತಾಳೆ.
ಅವಳು ಹೋಗಿ ಆಳಿನ ಕೈಲಿ ನೋಡೆ ನಮ್ಮಮ್ಮ ಬಂದು ಹುಡುಗನಿಗೆ ಕೊಡಲೋ ಮುದುಕನಿಗೆ ಕೊಡಲೋ ಅಂದರು. ನಾನು ಯಾರಿಗಾದರು ಕೊಡಿ ಆಗಲ್ಲ ಅಂತೀನ ಎಂದೆ ಎನ್ನುತ್ತಾಳೆ. ಆಗ ಆಳು ತಂಗ್ಲಾದರು ಕೊಡಿ ಬಿಸಿಯಾದರು ಕೊಡಿ ನಾನು ತಿನ್ನಲ್ಲ ಅಂತೀನ ಎನ್ನುತ್ತಾಳೆ.
ನೀತಿ :– ಈ ಜಗತ್ತೇ ಒಂದು ರೀತಿಯಲ್ಲಿ ಕಿವುಡು ರೂಪದ ಅಜ್ಞಾನ. ಏಕೆಂದರೆ ದೇವರು ಮಾಡಿದ ಸೃಷ್ಟಿಯಲ್ಲಿ ಮಾನವ ಮಾಡುವುದೆ ಇನ್ನೊಂದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.