ಕಥೆ

ವೈರ ಬಿಟ್ಟು ನೆಮ್ಮದಿ ಪಡೆಯಿರಿ ಈ ಕಥೆ ಓದಿ

ವೈರದಿಂದ ದೂರವಾದ ಮನಸ್ಸು ಸಹಜವಾಗಿ ಶಾಂತಿ

 

ವೈರ ಬಿಟ್ಟು ನೆಮ್ಮದಿ ಪಡೆಯಿರಿ

ಮನಸ್ಸು ಇದು ತುಂಬ ಸೂಕ್ಷ್ಮ ಗಹನ, ವಿಚಿತ್ರ, ಸಂಕೀರ್ಣ ಇನ್ನೂ ಹತ್ತು ಹಲವು ಗುಣಗಳನ್ನು ಮನಸ್ಸಿಗೆ ಅನ್ವಯಿಸಬಹುದು. ಮನುಷ್ಯನಿಗೆ ಮನಸ್ಸೆಂಬುದೇ ಇಲ್ಲವಾಗಿದ್ದರೆ ಅವನಿಗೆ ಯಾವ ಸಮಸ್ಯೆಯೂ ಹ ಯಾವ ಗೊಂದಲವೂ ಇರುತ್ತಿರಲಿಲ್ಲ. ಈ ಮನಸ್ಸಿನ ಮೂಲವಾದರೂ ಯಾವುದು ಮನಸ್ಸಿನ ಶಕ್ತಿ ಎಂಥದ್ದು? ಈ ವಿಷಯವಾಗಿ ಜಗತ್ತಿನ ಬಹುಪಾಲು ದಾರ್ಶನಿಕರು ಚಿಂತನೆಯನ್ನು ನಡೆಸಿದ್ದಾರೆ.

ಬುದ್ಧ ಭಗವಂತನೂ ಮನಸ್ಸಿನ ಎಲ್ಲ ಭಾವಗಳ ಬಗ್ಗೆ ಆಯಾಮಗಳ ಬಗ್ಗೆ ಆಳವಾಗಿ ಚಿಂತನೆ ನಡೆಸಿದವನು. ಬುದ್ಧನ ಉಪದೇಶಗಳ ಸಾರವನ್ನು ಸರಳವಾಗಿ ಸಂಕ್ಷಿಪ್ತವಾಗಿಯೂ ನಮಗೆ ಒದಗಿಸಿಕೊಡುವ ಒಂದು ಮಹಾಕೃತಿ ಧಮ್ಮಪದ. ಇದು ಧರ್ಮದ ಮಾರ್ಗವನ್ನು ತಿಳಿಸಿಕೊಡುವ ಕೈಪಿಡಿ.

ಧಮ್ಮಪದ ಆರಂಭವಾಗುವುದೇ ಮನಸ್ಸನ್ನು ಕುರಿತಂತೆ. ‘ಮನೋಪುಬ್ಬಂಗಮಾ ಧಮ್ಮಾ ಇದು ಅದರ ಮೊದಲ ಸೊಲ್ಲು, ಮನಸ್ಸೇ ಎಲ್ಲ ಧರ್ಮಗಳಿಗೂ ಒಡೆಯ ಎಂಬುದು ಇಲ್ಲಿಯ ಭಾವ. ಇಲ್ಲಿ ಧರ್ಮ ಶಬ್ದಕ್ಕೆ ಹಲವು ಅರ್ಥಗಳೇ ಇವೆಯೆನ್ನಿ! ದೇಹ-ಮಾತು-ಮನಸ್ಸುಗಳ ಮೂಲಕ ಮಾಡುವ ಕೆಲಸಗಳೆಲ್ಲವೂ ಇಲ್ಲಿ ‘ಧರ್ಮ’ ಎನಿಸಿಕೊಳ್ಳುತ್ತವೆ.

ಮನಸ್ಸನ್ನು ನಿಗ್ರಹಿಸಿಕೊಳ್ಳುವ, ಆ ಮೂಲಕ ಮಾನಸಿಕ ನೆಮ್ಮದಿಯನ್ನು ಉಳಿಸಿಕೊಳ್ಳುವ ವಿಧಾನವನ್ನು ಧಮ್ಮಪದ ತುಂಬ ಸೊಗಸಾಗಿ ನಿರೂಪಿಸಿದೆ. ನಿತ್ಯದ ಬದುಕಿನಲ್ಲಿ ಎದುರಾಗುವ ಸಣ್ಣ ಸಣ್ಣ ವಿವರಗಳಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಎಂಬುದು ನಮ್ಮ ಶಾಂತಿಗೆ ಮೂಲ ಎಂಬುದು ಇಲ್ಲಿ ಅದ್ಭುತವಾಗಿ ವರ್ಣಿತವಾಗಿದೆ.

ನನ್ನನ್ನು ಬೈದಿದ್ದಾನೆ, ನನ್ನನ್ನು ಹೊಡೆದಿದ್ದಾನೆ, ನನ್ನನ್ನು ಸೋಲಿಸಿದ್ದಾನೆ, ನನ್ನ ವಸ್ತುಗಳನ್ನು ಕಸಿದಿದ್ದಾನೆ’ ಎಂಬ ಚಿಂತೆಯಲ್ಲಿ ಯಾರು ಮುಳುಗಿರುತ್ತಾರೋ ಅಂಥವರ ವೈರಬುದ್ಧಿ ನಾಶವಾಗುವುದಿಲ್ಲ. ನನ್ನನ್ನು ಬೈದಿದ್ದಾನೆ, ನನ್ನನ್ನು ಹೊಡೆದಿದ್ದಾನೆ, ನನ್ನನ್ನು ಸೋಲಿಸಿದ್ದಾನೆ, ನನ್ನದನ್ನು ಕಸಿದುಕೊಂಡಿದ್ದಾನೆ ಎಂಬ ಚಿಂತೆಯನ್ನು ಯಾರು ಮಾಡುವುದಿಲ್ಲವೋ ಅಂಥವರ ವೈರವೂ ಆರಿ ಹೋಗುವುದು.

ಈ ಲೋಕದಲ್ಲಿ ಎಂದಿಗೂ ವೈರವು ವೈರದಿಂದಲೇ ನಾಶವಾಗದು, ಅವೈರದಿಂದಲೇ ವೈರದ ನಾಶ. ಇದು ಸನಾತನಧರ್ಮದ ಉಪದೇಶ.

ನೀತಿ :– ವೈರದಿಂದ ದೂರವಾದ ಮನಸ್ಸು ಸಹಜವಾಗಿಯೇ ಶಾಂತಿಗೆ ಹತ್ತಿರವಾಗಿರುತ್ತದೆಯೆನ್ನಿ!

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button