ಕರುಳು ಕಿತ್ತಿ ಬರ್ತದೆ – ಸಿಎಂ ಬೊಮ್ಮಾಯಿ
ದಿ ಕಾಶ್ಮೀರಿ ಫೈಲ್ಸ್ ಫಿಲ್ಮ್ ಗೆ ಕರ್ನಾಟಕ ಟ್ಯಾಕ್ಸ್ ಫ್ರೀ - ಬೊಮ್ಮಾಯಿ
ದಿ ಕಾಶ್ಮೀರಿ ಫೈಲ್ಸ್ ಫಿಲ್ಮ್ ಗೆ ಕರ್ನಾಟಕ ಟ್ಯಾಕ್ಸ್ ಫ್ರೀ – ಬೊಮ್ಮಾಯಿ
ದೇವರೇ ನಮ್ಮನ್ನ ಕ್ಷಮಿಸು – ಸಿಟಿ ರವಿ ವಿಷಾಧ
ವಿವಿ ಡೆಸ್ಕ್ಃ ಕರುಳು ಕಿತ್ತಿ ಬರುತ್ತದೆ. ಕಾಶ್ಮೀರ ನರಮೇಧದ ವಾಸ್ತವಿಕ ಸ್ಥಿತಿ ಕಟ್ಟಿಟ್ಟ ನಮ್ಮದೇ ದೇಶದಲ್ಲಿನಾ ಇದು ನಡೆದಿದ್ದು, ನಾವ್ಯಾರು ರಕ್ಷಿಸಲಾಗಲಿಲ್ಲ ಎಂಬ ಕೊರಗು ಭಾವತುಂಬಿ ಬರ್ತದೆ. ಮಾತನಾಡಲಿಕ್ಕೆ ಆಗ್ತಿಲ್ಲ ಒತ್ತಾಯದಿಂದ ಮಾತಾನಾಡುತ್ತಿರುವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ದುಃಖ ತುಂಬಿದ ಕಂಠದಿಂದ ಮಾಧ್ಯಮದ ಮುಂದೆ ಹೇಳಿಕೆ ನೀಡಿದರು.
ಬೆಂಗಳೂರ ನಗರದಲ್ಲಿ ಇಂದು ದಿ ಕಾಶ್ಮೀರ ಫೈಲ್ಸ್ ಚಲನಚಿತ್ರ ವೀಕ್ಷಿಸಿ ಅವರು ಮಾತನಾಡಿದರು.
ದಿ ಕಾಶ್ಮೀರಿ ಫೈಲ್ಸ್ ಪ್ರತಿಯೊಬ್ಬರು ನೋಡಲೇಬೇಕಾದ ಚಲನಚಿತ್ರ. ಈ ಚಿತ್ರ ನೂರಕ್ಕೆ ನೂರರಷ್ಟು ಟ್ಯಾಕ್ಸಿ ಫ್ರೀ ಮಾಡುವ ನಿರ್ಣಯ ಕೈಗೊಂಡಿದ್ದು, ಇಷ್ಟರಲ್ಲಿ ಆದೇಶಿಸಲಾಗುವದು ಎಂದರು.
ಚಲನಚಿತ್ರ ವೀಕ್ಷಿಸಿದ ಸಿಟಿ ರವಿ ಸಹ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದು, ಇದು ಸತ್ಯಶೋಧನೆಯ ಅನಾವರಣವಾಗಿದೆ. ನಮ್ಮ ದೇಶದಲ್ಲಿಯೇ ನಮ್ಮವರ ನರಮೇಧ ನಡೆದರೂ ನಾವ್ಯಾರು ಏನು ಮಾಡಲಿಕ್ಕೆ ಆಗಲಿಲ್ಲ. ಓ ದೇವರೇ ನಮ್ಮನ್ನ ಕ್ಷಮಿಸುಬಿಡು ಎಂದು ಜರ್ಜರಿತವಾದ ಧ್ವನಿಯಲ್ಲಿ ಕಳವಳಕಾರಿಯಾಗಿ ವಿಷಾಧಿಸಿದರು.
ಪ್ರತಿಯೊಬ್ಬರು ಈ ಚಿತ್ರ ನೋಡಿ ಈ ನರಮೇಧ ಅಲ್ಲಿಗೆ ನಿಲ್ಲಲ್ಲ ನಾಳೆ ಕೇರಳಕ್ಕೂ, ಕರ್ನಾಟಕಕ್ಕೂ ಕಾಲಿಡಲಿದೆ. ಕಾರಣ ಎಲ್ಲರೂ ಸಂಘಟಿತರಾಗಿ ಆಲೋಚಿಸಬೇಕು. ಹಿಂದೂಗಳು ಒಂದಾಗಿರಬೇಕು. ಸಂಘಟಿತವಾಗಿ ಸಮಸ್ಯೆಗಳನ್ನ ಎದುರಿಸಬೇಕು ಎಂದು ಕರೆ ನೀಡಿದರು.