ದಿನಕ್ಕೊಂದು ಕಥೆ
ಪ್ರೀ(ಪ್ರ)ತಿಫಲ
ವ್ಯಾನ್ ಗಾಗ್ ಖ್ಯಾತ ಕಲಾಕಾರ. ಆತನ ಚಿತ್ರಗಳು ಜಗತ್ಪ್ರಸಿದ್ಧ. ಈತ ನೋಡಲು ಬಹಳ ಕುರೂಪವಾಗಿದ್ದುದರಿಂದ ಆತನಿಗೆ ಹೊಗಳಿಕೆ ಕೇಳಿಯೇ ಗೊತ್ತಿರಲಿಲ್ಲ.
ಒಮ್ಮೆ ಆತ ವೇಶ್ಯೆಯೊಂದಿಗಿದ್ದಾಗ ಭಾವಾವೇಶದಲ್ಲಿ ಅವಳು, ನನಗೆ ನೀನೆಂದರೆ ಬಲು ಇಷ್ಟ ಎಂದಳು. ವ್ಯಾನ್ ಗಾಗ್ ತನ್ನ ಜೀವಿತಾವಧಿಯಲ್ಲೇ ಅಂಥ ಮೆಚ್ಚುಗೆ ಮಾತನ್ನು ಕೇಳಿರಲಿಲ್ಲ. ಹೀಗಾಗಿ ಉಬ್ಬಿಹೋದ, ನಿಜವಾಗಿಯೂ ? ನಿನಗೆ ನನ್ನಲೇನಿಷ್ಟ ? ಎಂದು ಪ್ರಶ್ನಿಸಿದ.
ಅವಳು ನಿನ್ನ ಕಿವಿಗಳೆಂದರೆ ನನಗೆ ಇಷ್ಟ ಎಷ್ಟು ಚೆನ್ನಾಗಿವೆ ಅವು ಎಂದಳು. ಮನೆಗೆ ಹೋದ ವ್ಯಾನ್‌ಗಾಗ್ ತನ್ನ ಕಿವಿಗಳನ್ನು ಕತ್ತರಿಸಿ, ಪ್ಯಾಕ್ ಮಾಡಿ ವೇಶ್ಯಗೆ ಗಿಫ್ಟ್ ಎಂದು ನೀಡಿದ.
ಏನ್ ಮಾಡ್ತಿದ್ದೆ ಎಂದು ಅವಳು ಗಾಬರಿಯಿಂದ ಪ್ರಶ್ನಿಸಿದಳು.
ವ್ಯಾನ್‌ಗಾಗ್ ಹೇಳಿದ. ನನ್ನ ಜೀವಮಾನದಲ್ಲಿ ಯಾರೂ ನನ್ನ ಏನನ್ನೂ ಮೆಚ್ಚಿಕೊಂಡಿರಲಿಲ್ಲ. ನೀನು ಕಿವಿ ಇಷ್ಟವೆಂದೆ. ನನ್ನ ಬಳಿ ನಿನಗೆ ಕೊಡಲು ಬೇರೇನೂ ಇರಲಿಲ್ಲ ಎಂದ !
ನೀತಿ :– ಪ್ರೀತಿಗೆ ಪ್ರತಿಫಲ ಏನು ದೊರೆಯುವುದೆಂದು ಊಹಿಸಲು ಸಾಧ್ಯವಿಲ್ಲ. ಹಾಗೆ ಭಗವದ್ಗೀತೆ ಹೇಳಿದಂತೆ “ಕರ್ಮಣ್ಯೇವಾದಿಕಾರಸ್ತೆ ಮಾ ಫಲಷು ಕದಾಚನ” ಕರ್ಮ ಅಥವಾ ಕಾಯಕ ಮಾಡಲು ಆದಿಕಾರ ಮಾತ್ರ ನಮಗೆ ಅದರ ಪ್ರತಿಫಲ ಸಿಕ್ಕೆ ಸಿಗುವುದೆಂಬ ಬರವಸೆ ಪ್ರತಿಯೊಬ್ಬರಲ್ಲಿ ಇರಬೇಕು. “ದುಡಿದವನಿಗೆ ದುಡಿದಷ್ಟು ಕೂಲಿ” ಎಂಬುದು ಅನುಭಾವಿಗಳ ಮಾತು ಅಷ್ಟೇ ಸತ್ಯ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.