ಬಸವಭಕ್ತಿ

ಜಲಮೂಲಗಳಾದ ನದಿಗಳನ್ನು ರಕ್ಷಿಸಲೇಬೇಕಾಗಿದೆ, ಯಾಕೆಂದರೆ…

‘ಮಜಾ ಟಾಕೀಸ್ನಲ್ಲೊಂದು ಅಚ್ಚರಿ ಸಿರೀಸ್-6 : ಸದ್ಗುರು ಜಗದೀಶ ವಾಸುದೇವಶ್ರೀ ಹೇಳಿದ್ದು…

ಹಳ್ಳಿಗೆ ಹಳ್ಳಿಯೇ ಖಾಲಿಯಾಗಿ ಎಲ್ಲರೂ ಪಟ್ಟಣಗಳಿಗೆ ಗುಳೆ ಹೋಗುವರು, ಯಾಕೆಂದರೆ ಹಳ್ಳಿಗಳ ಎಲ್ಲ ನೀರನ್ನೂ ಪಟ್ಟಣಗಳಿಗೆ ಪಂಪ್ ಮಾಡುವ ಪರಿಸ್ಥಿತಿ ಇರುತ್ತದೆ. ಸ್ವಲ್ಪ ಯೋಚಿಸಿ ನೋಡಿ. 50ಲಕ್ಷ ಜನರು ಒಂದು ಹನಿ ನೀರಿಗಾಗಿ ಬೆಂಗಳೂರಿಗೆ ಬಂದು ಕುಳಿತದೆ ಇಲ್ಲಿರುವವರ ಗತಿ ಏನು? ಬಂದವರ ಗತಿ ಏನು? ಹಾಗಾಗದೆ ಇರಲಿ ಅಂತಲೇ ನಾವು ಈಗಲೇ ನೀರಿನ ಮೂಲಗಳನ್ನೆಲ್ಲಾ ರಕ್ಷಿಸಬೇಕು, ಬೆಳೆಸಬೇಕು. ಅದರಲ್ಲೂ ಮುಖ್ಯವಾಗಿ ನದಿಗಳನ್ನು, ಯಾಕೆಂದರೆ ನೀರಿನ ಬಹುದೊಡ್ಡ ಮೂಲವೆಂದರೆ ನದಿಗಳೇ. ಮತ್ತೆ ನದಿಗಳ ಮೂಲವೆಂದರೆ ಕಾಡುಗಳು. ಈ ಒಂದು ಮುಖ್ಯವಾದ ಸತ್ಯವನ್ನು ಎಲ್ಲರೂ ಮನಗಾಣಬೇಕು. ಮತ್ತು  ಮೀಡಿಯಾದವರು ಈ ಸತ್ಯವನ್ನು ಚೆನ್ನಾಗಿ ಪ್ರಚಾರ ಮಾಡಬೇಕು.

ಅದೇನೆಂದರೆ ನೀರಿನಿಂದ ಮರಗಳು  ಬಂದದ್ದಲ್ಲ, ಮರಗಳಿಂದ ನೀರು ಬಂದದ್ದು. ಮರವಿದ್ದರೆ ನೀರು, ನೀರಿದ್ದರೆ ಮರವಲ್ಲ. ಈಚೆಗೆ ವಿಗ್ನಾನಿಗಳು ಬ್ರೆಜಿಲ್ ದೇಶದ ದಟ್ಟಕಾಡುಗಳ ಬಗ್ಗೆ ಅಧ್ಯಯನ ಮಾಡಿ ಲೇಖನವನ್ನು ಪ್ರಕಟಿಸಿದ್ದಾರೆ. ದಟ್ಟಕಾಡುಗಳಲ್ಲೇ ಹೆಚ್ಚಿನ ಮಳೆಯಾಗುವುದು ಯಾಕೆ ಅನ್ನುವ ವಿಷಯದ ಬಗ್ಗೆ ಸಂಶೋಧನೆ ಮಾಡಿರುವ ಅವರು ಹೇಳುವುದೇನೆಂದರೆ, ದಟ್ಟವಾದ ಕಾಡುಗಳಲ್ಲಿ ಬಹುವಿಧವಾದ ಸಾಂದ್ರವಾದ, ಸಂಕೀರ್ಣವಾದ ಸಸ್ಯವರ್ಗವು ಇರುವುದರಿಂದ ಬಾಷ್ಟಪ್ರಸರಣ(transpiration) ಎಂಬ ಭೌತಿಕ ಪ್ರಕ್ರಿಯೆಯಾಗಿ ಫೋಟೋಸಿಂಥೆಸಿಸ್ (photosynthesis) ಕಾರಣದಿಂದ ಉತ್ಪಾದನೆಯಾಗುವ ಬಾಷ್ಪವಸ್ತುವು ಮಳೆಮೋಡಗಳನ್ನು ತಡೆಯುವುದರಿಂದ ಆ ಜಾಗದಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಒಟ್ಟಿನಲ್ಲಿ ಎಳ್ಳಷ್ಟೂ ಅನುಮಾನಕ್ಕೆ ಆಸ್ಪದವಿಲ್ಲದೆ, ಆಧುನಿಕ ವೈಗ್ನಾನಿಕ ವಿಧಾನಗಳಿಂದ ಸಾಬೀತಾಗಿರುವುದೆಂದರೆ, ಕಾಡುಗಳೇ ಮಳೆಗೆ ಕಾರಣ. ಕಾಡುಗಳೇ ಮಳೆನೀರನ್ನು ಹಿಡಿದಿಟ್ಟುಕೊಂಡು, ನಿಧಾನವಾಗಿ ನದಿಯೊಳಗೆ ಬಿಡುತ್ತವೆ. ಹಾಗಾಗಿ, ನದಿಗಳ ರಕ್ಷಣೆಗೆ ನಾವೇನು ಮಾಡಬೇಕು ಎನ್ನುವ ಪ್ರಶ್ನೆಗೆ ಪ್ರಶ್ನೆಯೆಂದರೆ, ನಮಗೆ ಈ ಕೆಲಸವನ್ನು ಮಾಡಿ ಮುಗಿಸಬೇಕೆಂಬ ನಿಯತ್ತು, ಧೈರ್ಯ, ಬದ್ಧತೆ ಇದೆಯೇ ಎನ್ನುವುದು.

ಹಾಗಾಗಿ, ಈ ಅಭಿಯಾನವನ್ನು ಪ್ರಾರಂಭಿಸುವ ಹಂತದಲ್ಲಿ ಎರಡು ತಿಂಗಳ ಹಿಂದೆ ನನಗೆ ತಿಳಿದ ಜನರೊಂದಿಗೆ ಮಾತನಾಡಲು ಪ್ರಾರಂಭಿಸಿದೆ. ಒಂದು ವಿಚಿತ್ರವೆಂದರೆ, ನನಗೆ ಕೆಲವು ಸ್ವಯಂನಿಯಮಿತ ಮಂತ್ರಿಗಳಿದ್ದಾರೆ. ನಾನು ಕೇಳಲಿ ಬಿಡಲಿ, ನನಗೆ ಸಲಹೆ ಕೊಡುವುದನ್ನು ಮಾತ್ರ ಅವರು ಬಿಡುವುದಿಲ್ಲ. ಯಾವೊಂದು ಮುಖ್ಯವಾದ ಕೆಲಸವನ್ನು ಪ್ರಾರಂಭ ಮಾಡುವ ಸಮಯದಲ್ಲಿ ಆಗಲಿ ಅವರು ಅಡ್ಡ ಮಾತಾಡಿ, ಈ ಕೆಲಸ ಆಗಲಾರದು ಎಂದು ಹೇಳುವುದನ್ನು ಮರೆಯುವುದಿಲ್ಲ. ಆಗ ನಾನು ಅಂದುಕೊಳ್ಳುತ್ತೇನೆ, ಈ ಕೆಲಸ ಖಂಡಿತವಾಗಿ ಆಗುತ್ತದೆ.

ಈಸಲವೂ ಅಷ್ಟೇ, ಕೆಲವರು ಹೇಳಿದರು. ಸದ್ಗುರು ಇದಾಗದ ಕೆಲಸ, ನಿಮ್ಮ ಗೌರವವನ್ನು ನೀವು ಪಣಕ್ಕಿಡುತ್ತಿದ್ದೀರಿ. ನಿಮಗೆ ಯಾಕೆ ಬೇಕು ಅಂತ. ನಾನು ಹೇಳಿದೆ ನನ್ನ ಗೌರವವನ್ನು ಪಣಕ್ಕಿಡುತ್ತೇನೆ. ಪ್ರಾಣವನ್ನೂ ಪಣಕ್ಕಿಡುತ್ತೇನೆ, ಅಡ್ಡಿಯಿಲ್ಲ. ಆದರೆ, ಮುಂದಿನ ಪೀಳಿಗೆಗಾಗಿ ನಾನು ಮಾಡಬೇಕಾಗಿರುವ ಕರ್ತವ್ಯವನ್ನು ಮಾಡಿಯೇ ತೀರುತ್ತೇನೆ. ನದಿಗಳನ್ನು ರಕ್ಷಿಸಲೇಬೇಕಾಗಿದೆ.

ಮುಂದುವರೆಯುವುದು…

-ಮಲ್ಲಿಕಾರ್ಜುನ ಮುದನೂರ್

Related Articles

Leave a Reply

Your email address will not be published. Required fields are marked *

Back to top button