ಅತಿಯಾಸೆ
ಒಮ್ಮೆ ಒಬ್ಬ ಶಿಲ್ಪಿ ಉರಿಬಿಸಿಲಿನಲ್ಲಿ ಒಂದು ಕಲ್ಲು ಬಂಡೆಯನ್ನ ವಿಗ್ರಹಕ್ಕಾಗಿ ಕಡಿಯುತ್ತಾ ಕುಳಿತಿದ್ದಾಗ ಅವನಿಗೆ ತಲೆಯಲ್ಲಿ ಒಂದು ಆಲೋಚನೆ ಬರುತ್ತದೆ.
ನಾನೇ ಸೂರ್ಯನಾದರೆ ಈ ಬಿಸಿಲಿನ ತಾಪತ್ರಯವೇ ಇರದು ಎಂದು ಕೊಂಡ ತಕ್ಷಣ ಸೂರ್ಯನಾದ. ಸಂಜೆಯ ಹೊತ್ತಿಗೆ ಕಪ್ಪನೆಯ ಭಾರಿ ಮೋಡಗಳು ಭರದಿಂದ ಸಾಗುತ್ತಿದೆ ಹಾಗೇ ಸೂರ್ಯನನ್ನೇ ಮುಚ್ಚುವಂತೆ ಅಡ್ಡಬಂದಾಗ ನನಗಿಂತಲೂ ಈ ಮೋಡಗಳೇ ಮೇಲು ಅಂದುಕೊಂಡು ನಾನು ಮೋಡವಾಗ ಬಾರದೇಕೆ ಎಂದು ಕೊಂಡ ತಕ್ಷಣ ಕಪ್ಪನೆಯ ಮೋಡವಾಗಿ ಆಕಾಶದಲ್ಲಿ ಸ್ವಚ್ಛಂದವಾಗಿ ಚಲಿಸುತ್ತಿದ್ದಾಗ ದೊಡ್ಡ ಬೆಟ್ಟ ಒಂದಕ್ಕೆ ಡಿಕ್ಕಿ ಹೊಡೆದ. ಆಗ ಅವನಿಗೆ ಹೊಳೆದದ್ದು ಈ ಎತ್ತರದ ಬೆಟ್ಟವೇ ನಾನಾದರೆ ಹೇಗೆ ಎಂದು.
ಬಯಸಿದಂತೆ ಕ್ಷಣದಲ್ಲಿ ಬೆಟ್ಟವಾದ. ಬೆಟ್ಟವಾಗಿ ಆಕಾಶದೆತ್ತರಕ್ಕೆ ತಲೆ ಇದ್ದಂತೆ ಭಾಸವಾಗಿ ನನಗಿಂತಲೂ ದೊಡ್ಡವರು ಯಾರೂ ಇಲ್ಲವೆಂದು ಕೊಂಡಾಗ ತನ್ನ ಕಾಲು ಬುಡದಲ್ಲಿ ಏನೋ ಶಬ್ದ, ಬಾಗಿ ನೋಡಿದರೆ ಹತ್ತು ಹಲವಾರು ಬುಲ್ಡೋಜರ್ ಗಳು ಲಾರಿಗಳು, ಟ್ರ್ಯಾಕ್ಟರ್, ಕಲ್ಲು ಕುಟುಕರು, ಸಿಡಿಮದ್ದು ಇಟ್ಟು ಬಂಡೆ ಒಡೆಯುವರು, ಹೀಗೆ ನೂರಾರು ಜನರನ್ನು ಕಂಡು ಬೆಚ್ಚಿದ.
ಆಗ ಜ್ಞಾನೋದಯ ವಾಯಿತು. ಅಯ್ಯೋ ನಾನು ನನ್ನ ಕಾಯಕ ಮಾಡಿ ಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು .ಈಗಿನ ಸ್ಥಿತಿಯಲ್ಲಿ ಎಂದೋ ಒಂದು ದಿನ ಉರುಳಿ ನಾಶವಾಗುವುದಂತೂ ಸತ್ಯ.
ಶಿಲ್ಪಿಯಾಗಿ ನಾನು ಕಡೆದು ಕೊಟ್ಟ ನೂರಾರು ವಿಗ್ರಹಗಳು ದೇವರುಗಳಾಗಿ ಜನರಿಂದ ಇಂದು ಪೂಜೆ ಗೊಳ್ಳುತ್ತಿದೆ ಎನ್ನುವ ಸಂತೋಷವಾದರೂ ಇತ್ತು. ಈಗ ಅದನ್ನೂ ಕಳೆದುಕೊಂಡೆ ಎಂದು ಬೆಟ್ಟವಾಗಿ ದುಃಖ ಪಟ್ಟರೂ ಪ್ರಯೋಜನವಿಲ್ಲ ಎಂದು ಬಹಳ ನೊಂದುಕೊಂಡ.
ನೀತಿ :– ನಾವು ನಾವಾಗಿದ್ದರೆ ಚಂದ. ಆಸೆಯ ಎಲ್ಲೇ ಮೀರಿ ಬಯಸಿದರೆ ಏನಾಗಬಹುದು ಎಂಬುದಕ್ಕೆ ಉತ್ತಮ ಊದಾಹರಣೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.