ಅಪಘಾತಃ ಶರಣಗೌಡ ಹೊಸಮನಿ ಸಾವು
yadgiri, ಶಹಾಪುರಃ ಸ್ಕೂಟಿ ಮೇಲೆ ಹೊರಟಿದ್ದ ವ್ಯಕ್ತಿಯೋರ್ವನಿಗೆ ಟಿಪ್ಪರ್‍ವೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ನಗರದ ಹೊರವಲಯದ ಭೀಮರಾಯನ ಗುಡಿ ರಸ್ತೆ ಮಾರ್ಗದಲ್ಲಿ ಶನಿವಾರ 7 ಗಂಟೆ ಸುಮಾರಿಗೆ ಡಿಗ್ರಿ ಕಾಲೇಜು ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಶರಣಗೌಡ ತಂದೆ ರಾಮನಗೌಡ ಉಕ್ಕಿನಾಳ(47) ಎಂಬ ದುರ್ದೈವಿ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ ಸೋದರಳಿಯನಾಗಿದ್ದು, ನಾಳೆ ಸ್ವಗ್ರಾಮ ಉಕ್ಕಿನಾಳದಲ್ಲಿ ಬೆಳಗ್ಗೆ 11 ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.