ಪ್ರಮುಖ ಸುದ್ದಿ

ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ- ಹೈಕಮಾಂಡ್ ನಿರ್ಧಾರಕ್ಕೆ ಬದ್ಧ – ಡಾ.ಸುಬೇದಾರ

12 ವರ್ಷಗಳಿಂದ ಬಿಜೆಪಿಯಲ್ಲಿ ಸೇವೆ

 

ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ- ಹೈಕಮಾಂಡ್ ನಿರ್ಧಾರಕ್ಕೆ ಬದ್ಧ – ಡಾ.ಸುಬೇದಾರ

yadgiri, ಶಹಾಪುರಃ ಬರುವ ವಿಧಾನಸಭೆ ಚುನಾವಣೆಯಲ್ಲಿ ಶಹಾಪುರ ಕ್ಷೇತ್ರದಿಂದ ಸ್ಪರ್ಧಿಸುವ ಅಭಿಲಾಷೆ ಹೊಂದಿದ್ದು, ಬಿಜೆಪಿ ಹೈಕಮಾಂಡ್ ಟಿಕೆಸ್ ನೀಡಿದ್ದಲ್ಲಿ ಸ್ಪರ್ಧೆಗೆ ಇಳಿಯುತ್ತೇನೆ ಎಂದು ಬಿಜೆಪಿ ಹಿರಿಯ ಮುಖಂಡ ಡಾ.ಚಂದ್ರಶೇಖರ ಸುಬೇದಾರ ಆಶಯ ವ್ಯಕ್ತಪಡಿಸಿದರು.

ನಗರದ ಸುಬೇದಾರ ಆಸ್ಪತ್ರೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದು, ಗ್ರಾಮೀಣ ಭಾಗದಲ್ಲಿ ಉಚಿತ ಆರೋಗ್ಯ ಸಲ್ಲಿಸುತ್ತಿರುವದರಿಂದ ಗ್ರಾಮೀಣ ಭಾಗದ ಜನರು ಚುನಾವಣೆಗೆ ನಿಲ್ಲುವಂತೆ ಒತ್ತಾಯ ಬರುತ್ತಿದೆ. ಹೀಗಾಗಿ ಈ ಬಾರಿ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡಿದ್ದಲ್ಲಿ ಅಭ್ಯರ್ಥಿ ಎಂದು ಸೂಚಿಸಿದ್ದಲ್ಲಿ ಚುನಾವಣೆಗೆ ಎದುರಿಸುವೆ. ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿದ್ದೇನೆ.

ಕ್ಷೇತ್ರದಲ್ಲಿ ನನ್ನ ಸೇವೆ ಗುರುತಿಸಿ ಬಿಜೆಪಿ ಹೈಕಮಾಂಡ್ ನಿಮ್ಮ ಸೇವೆ ಮುಂದುವರೆಯಲಿ ಎಂದು ಸೂಚಿಸಿದೆ. ನನ್ನ ಕೆಲಸ ನಾನು ಮಾಡುತ್ತಿರುವೆ ಜನರ ಒತ್ತಾಸೆ ಮೇರೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಅಡಿವೆಪ್ಪ ಜಾಕಾ, ರಾಜಶೇಖರ ನಗನೂರ, ಕಿರಣ ಸುಬೇದಾರ ಉಪಸ್ಥಿತರಿದ್ದರು.

 

ಉಚಿತ ಆರೋಗ್ಯ ಸೇವೆಗೆ ಇನ್ನೆರೆಡು ಅಂಬ್ಯುಲೆನ್ಸ್ ಸಿದ್ಧ – ಡಾ.ಸುಬೇದಾರ

yadgiri, ಶಹಾಪುರಃ ಕಳೆದ 34 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಈಚೆಗೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ನಮ್ಮ ತಂದೆ ಅಚ್ಚಪ್ಪಗೌಡರ ಸ್ಮರಣಾರ್ಥವಾಗಿ ಉಚಿತ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದು, ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ಸೇವೆ ಸಲ್ಲಿಸುವ ಕೆಲಸ ಮಾಡುತ್ತಿದ್ದೇನೆ. ಅಗತ್ಯನುಸಾರವಾಗಿ ಇನ್ನಷ್ಟು ಸೇವೆ ಸಲ್ಲಿಸಬೇಕೆಂಬ ಹಿನ್ನೆಲೆ ಇನ್ನೆರಡು ಅಂಬ್ಯುಲೆನ್ಸ್ ಉಚಿತ ಸೇವೆಗಾಗಿ ಸಿದ್ಧ ಪಡಿಸಿದ್ದು, ಕೆಲವೇ ದಿನಗಳಲ್ಲಿ ಕ್ಷೇತ್ರದ ಜನರ ಸೇವೆಗೆ ಬರಲಿವೆ ಎಂದು ಖ್ಯಾತ ವೈದ್ಯ ಡಾ.ಚಂದ್ರಶೇಖರ ಸುಬೇದಾರ ತಿಳಿಸಿದರು.

ನಗರದ ಸುಬೇದಾರ ಆಸ್ಪತ್ರೆ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಕ್ಷೇತ್ರದ ಹಲವಾರು ಹಳ್ಳಿಗಳಿಗೆ ಇದುವರೆಗೂ ಆರೋಗ್ಯ ಸೌಲಭ್ಯವಿಲ್ಲ. ಅದನ್ನು ಗಮನಿಸಿ ಯಾವ ಗ್ರಾಮಗಳಿಗೆ ಆರೋಗ್ಯ ಸೇವೆಯ ಅಗತ್ಯವಿದೆ ಅಂತಹ ಹಳ್ಳಿಗಳಿಗೆ ಬಡ ಜನರ ಆರೋಗ್ಯ ಕುರಿತು ಉಚಿತ ತಪಾಸಣೆ ನಡೆಸಿ ಸೂಕ್ತ ವಿಕಿತ್ಸೆ ನೀಡುವ ಕೆಲಸ ಮಾಡುತ್ತಿದ್ದೇವೆ. ಜೊತೆಗೆ ಉಚಿತವಾಗಿ ಔಷಧಿಯು ನೀಡಲಾಗುತ್ತಿದೆ. ಇಷ್ಟರಲ್ಲಿಯೇ ಇನ್ನೂ ಎರಡು ಅಂಬ್ಯುಲೆನ್ಸ್ ಬರಲಿದ್ದು, ಮೂರು ಅಂಬ್ಯುಲೆನ್ಸ್ ಗ್ರಾಮೀಣ ಭಾಗದ ಜನರ ಆರೊಗ್ಯ ರಕ್ಷಣೆಗೆ ಉಚಿತ ಸೇವೆಯಲ್ಲಿ ತೊಡಗಿಸಿಕೊಳ್ಳಲಿವೆ.

ಪ್ರತಿ ಅಂಬ್ಯುಲೆನ್ಸ್ ನಲ್ಲಿ ವೈದ್ಯರು ಇರಲಿದ್ದು, ಯಾವುದೇ ರೋಗಕ್ಕೆ ಚಿಕಿತ್ಸೆ, ಔರ್ಷಧಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ತಪಾಸಣೆ ನಡೆಸಿ ಚಿಕಿತ್ಸೆ ನೀಡುವ ಮೂಲಕ ನಮ್ಮ ತಂದೆಯವರ ಸ್ಮರಣಾರ್ಥ ಬಡ ಜನರ ಸೇವೆಗೆ ಮುಂದಾಗಿದ್ದೇನೆ. ಕ್ಷೇತ್ರದ ಜನತೆ ಸಹ ಜನಸೇವೆ ಕಂಡು ತೃಪ್ತ ಭಾವನೆ ವ್ಯಕ್ತವಾಗುತ್ತಿದೆ ಎಂದು ವಿವರಿಸಿದರು.

 

Related Articles

Leave a Reply

Your email address will not be published. Required fields are marked *

Back to top button