ಅಸಂವಿಧಾನಿಕ ಪದ ಬಳಕೆ ಸಲ್ಲದು, ಅಭಿಮಾನಿಗಳ ಆಕ್ರೋಶದ ಮಾತು ತರವಲ್ಲ – ದರ್ಶನಾಪುರ
ಅಭಿಮಾನಿಗಳು ನಿರೂಪಕನ ವಿರುದ್ಧ ಹರಿಹಾಯ್ದಿರುವದು ಸರಿಯಲ್ಲ - ದರ್ಶನಾಪುರ
ಅಸಂವಿಧಾನ ಪದ ಬಳಕೆ ಸಲ್ಲದು – ದರ್ಶನಾಪುರ
ಅಭಿಮಾನಿಗಳು ನಿರೂಪಕನ ವಿರುದ್ಧ ಹರಿಹಾಯ್ದಿರುವದು ಸರಿಯಲ್ಲ – ದರ್ಶನಾಪುರ
ಯಾದಗಿರಿ ಶಹಾಪುರಃ ಇತ್ತೀಚೆಗೆ ರಾಜ್ಯಮಟ್ಟದ ಸುದ್ಧಿ ವಾಹಿನಿಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಅದರ ನಿರೂಪಕರು ಬಳಸಿದ ಭಾಷೆ ಅಸಂವಿಧಾನಿಕವಾಗಿದ್ದು, ಕ್ಷೇತ್ರದ ಜನರು, ಅಭಿಮಾನಿಗಳಲ್ಲಿ ನೋವುಂಟು ಮಾಡಿರುವದು ಸತ್ಯ. ಹಾಗಂತ ಆ ಸುದ್ದಿ ವಾಹಿನಿಯ ನಿರೂಪಕನ ವಿರುದ್ಧ ಹರಿಹಾಯ್ದಿರುವದು ನಮ್ಮ ಘನತೆಗೆ ತಕ್ಕುದಲ್ಲ ಎಂದು ಮಾಜಿ ಸಚಿವ, ಹಾಲಿ ಶಾಸಕ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ಕ್ಷೇತ್ರದ ಕೆಂಭಾವಿ ಪಟ್ಟಣದಲ್ಲಿ 4.90 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲು ಕೊಠಡಿ ನಿರ್ಮಿಸದಿರುವ ಬಗ್ಗೆ, ಮತ್ತು ಮರಣೋತ್ತರ ಪರೀಕ್ಷೆಯನ್ನು ಸಾರ್ವಜನಿಕವಾಗಿ ರಸ್ತೆ ಬದಿಯೇ ನಡೆಯುತ್ತಿರುವದನ್ನು ಸುದ್ದಿ ವಾಹಿನಿ ಈ ಕುರಿತ ಸ್ಟೋರಿ ಬಿತ್ತರಿಕೆ ಮಾಡಿತ್ತು.
ಈ ವೇಳೆ ಸುದ್ದಿ ನಿರೂಪಕ ಸಮಸ್ಯ ಬಗ್ಗೆ ಮಾತನಾಡುವಾಗ, ನನ್ನ ವಿರುದ್ಧ ಅಸಂವಿಧಾನಿಕ ಪದ ಬಳಸಿರುವದು ನಾಗರಿಕರ, ನಮ್ಮ ಕುಟುಂಬದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿ, ಹಲವಾರು ಜನ ನಿರೂಪಕರಿಗೆ ಕರೆ ಮಾಡಿ ಇಲ್ಲ ಸಲ್ಲದ ಮಾತನಾಡಿರುವದುಂಟು, ಮಾಧ್ಯಮ ತಪ್ಪು ಮಾಡಿದಾಗ ತಿದ್ದಿ ಹೇಳುವದು, ಸಮಸ್ಯ ಪರಿಹಾರಕ್ಕೆ ಸಲಹೆ ಸೂಚನೆ ನೀಡುವದು ಮಾಧ್ಯಮ ರಂಗದ ಕರ್ತವ್ಯ.
ಕ್ಷೇತ್ರದ ಆ ಸಮಸ್ಯೆಯ ಪರಿಪೂರ್ಣ ಮಾಹಿತಿ ಪಡೆದು ಸುದ್ದಿ ಬಿತ್ತರಿಸಬೇಕಿತ್ತು, ಆಸ್ಪತ್ರೆ ಬಳಿಯೇ ಕಂದಾಯ ಇಲಾಖೆ ಹಳೇ ಕಟ್ಟಡವಿದೆ ಅದನ್ನು ಮರಣೋತ್ತರ ಪರೀಕ್ಷಾ ಕೊಠಡಿಯಾಗಿಸಲು ಹಿಂದೇ ಸೂಚಿಸಲಾಗಿತ್ತು.
ಆದರೆ ಅಧಿಕಾರಿಗಳ ಬೇಜವಬ್ದಾರಿಯಿಂದ ಶವಗಾರವಾಗಿ (ಮರಣೋತ್ತರ ಪರೀಕ್ಷಾ ಕೊಠಡಿ) ಉಪಯೋಗಿಸಿರುವದಿಲ್ಲ. ಇದ್ಯಾವದು ನನ್ನ ಗಮನಕ್ಕೂ ಬಾರದೆ ನಡೆದಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕುರಿತು ಪ್ರಸ್ತಾವನೆ, ಅಥವಾ ಗಮನಕ್ಕೆ ತಂದಿದ್ದರು ಕೆಕೆಆರ್ಡಿಬಿಯಿಂದಾಗಲಿ ಅಥವಾ ಶಾಸಕರ ಅನುದಾನದಿಂದಾಗಲಿ ಕೆಲಸ ಮಾಡಿಸಬಹುದಿತ್ತು.
ಇರಲಿ ಈಗಲೂ ಸಮಯವೇನ ಮೀರಿಲ್ಲ ಆ ಕುರಿತು ಅಧಿಕಾರಿಗಳ ಜೊತೆ ಮಾತನಾಡಿದ್ದು, ಸಮಸ್ಯೆ ಪರಿಹರಿಸುವದಾಗಿ ತಿಳಿಸಿದ ಅವರು, ಅಭಿಮಾನಿಗಳು ಮಾಧ್ಯಮದ ಬಂಧುಗಳ ಮೇಲೆ ಹರಿಹಾಯುವುದು ನಿಜಕ್ಕೂ ನಮ್ಮ ಘನತೆಗೆ ತಕ್ಕದ್ದಲ್ಲ.ಅದನ್ನು ನಾನು ಒಪ್ಪುವುದೂ ಇಲ್ಲ. ಸಮರ್ಥನೆಯನ್ನು ಸಹ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿರುವದು.
ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಗೌರವಿಸುವವನು ನಾನು. ನಾವು ದಾರಿತಪ್ಪಿದಲ್ಲಿ ನಮ್ಮ ಕಣ್ತೆರೆಸುವ ಕಾರ್ಯ ಮಾಡುವುದು ಮಾಧ್ಯಮಗಳ ಹಕ್ಕು ಮತ್ತು ಜವಬ್ದಾರಿ. ಆದರೆ ನನ್ನಿಂದಾಗಲೀ, ಸಂಬಂಧಿಸಿದ ಅಧಿಕಾರಿಗಳ ಬಳಿಯಾಗಲಿ ಯಾವುದೇ ಸ್ಪಷ್ಟನೆ ಪಡೆಯದೇ ಏಕಾಏಕಿ ನಾವು ಮಾಡಿರುವ ಎಲ್ಲಾ ಒಳ್ಳೆಯ ಕೆಲಸ ಕಾರ್ಯಗಳನ್ನು ಗಣನೆಗೆ ತೆಗೆದುಕೊಳ್ಳದೇ, ಸಂಬಂಧವೇ ಇರದ ವಿಷಯದಲ್ಲಿ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅಸಂಸದೀಯ ಪದಗಳನ್ನು ಬಳಸಿ ಹೀಯಾಳಿಸಿ ಮಾತನಾಡುವುದು ನಿಜಕ್ಕೂ ತರವಲ್ಲ ಎಂದಿದ್ದಾರೆ.
ಇನ್ನು ಕೆಂಭಾವಿ ಪ್ರಕರಣಕ್ಕೆ ಬರುವುದಾದರೆ..
ಸುಸಜ್ಜಿತವಾದ ಬೃಹತ್ ಆಸ್ಪತ್ರೆ ಕಟ್ಟಡವಿದೆ. ಪಕ್ಕದಲ್ಲೇ ಕಂದಾಯ ಇಲಾಖೆಯು ಒಂದು ಕಟ್ಟಡವನ್ನು ಸಹ ಇದೇ ಉದ್ದೇಶಕ್ಕೆ ಆಸ್ಪತ್ರೆಗೆ ನೀಡಿದೆ. ಹಾಗೆಯೇ ಪಕ್ಕದ ಮಲ್ಲಾ ಗ್ರಾಮ ಸೇರಿದಂತೆ ಸನಂಬಿತಮುತ್ತಲಿನ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡಗಳು ಇವೆ. ಇಷ್ಟೆಲ್ಲಾ ಇದ್ದರೂ ಕೆಂಭಾವಿಯಲ್ಲಿ ಈ ರೀತಿ ರಸ್ತೆ ಬದಿಯಲ್ಲಿ ಅದೂ ರಾತ್ರಿ ಹೊತ್ತು ಏಕೆ ಶವಪರೀಕ್ಷೆ ಮಾಡುತ್ತಿದ್ದರೋ ನನಗೆ ಆಶ್ಚರ್ಯವಾಗುತ್ತಿದೆ..!!! ಇದು ಮನುಷ್ಯತ್ವ ಇರುವ ಯಾರೂ ಒಪ್ಪುವ ಮಾತಲ್ಲ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಉತ್ತರಿಸಬೇಕು.
-ಶರಣಬಸಪ್ಪ ದರ್ಶನಾಪುರ. ಶಾಸಕರು.