ಶಹಾಪುರ: ಕಲ್ಲು ತುಂಬಿದ ಲಾರಿ ಪಲ್ಟಿ, ಇಬ್ಬರ ಸಾವು
ಕಲ್ಲು ತುಂಬಿದ ಲಾರಿ ಪಲ್ಟಿ, ಇಬ್ಬರ ಸಾವು
ಶಹಾಪುರಃ ತಾಲೂಕಿನ ಶಿರವಾಳ ಗ್ರಾಮದ ಬಳಿ ಚಲಿಸುತ್ತಿದ್ದ ಕಲ್ಲು ತುಂಬಿದ ಲಾರಿಯೊಂದರ ಟೈರ್ ಬ್ಲಾಸ್ಟ್ ಆಗಿದೆ. ಪರಿಣಾಮ ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರಗಾಯಗೊಂಡಿದ್ದು ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಳುಗಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಾಡಿ ಪಟ್ಟಣದಿಂದ ಕಲ್ಲು ತುಂಬಿಕೊಂಡು ಹೊರಟಿದ್ದ ಲಾರಿ ಮಾರ್ಗ ಮಧ್ಯೆ ಶಿರವಾಳ ಸಮೀಪದಲ್ಲಿ ಪಲ್ಟಿಯಾಗಿದೆ. ಹೀಗಾಗಿ, ಲಾರಿಯಲ್ಲಿದ್ದವರ ಮೇಲೆ ಕಲ್ಲುಗಳು ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು ನಾಲ್ವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಘಟನೆಯಲ್ಲಿ ಮೃತಪಟ್ವವರನ್ನು ಏವೂರು ಗ್ರಾಮದ ಭೀಮರಾಯ(35) ಮತ್ತು ಮರೆಪ್ಪ (38)ಎಂದು ಗುರುತಿಸಲಾಗಿದೆ. ಗಾಯಾಳುಗಳು ಸಹ ಏವೂರ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ.
ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪಿಎಸ್ ಐ ರಾಠೋಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭೀ.ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.