ಪ್ರಮುಖ ಸುದ್ದಿ

ಸೈಂಟ್ ಪೀಟರ್ ಶಾಲಾ ವಾರ್ಷಿಕೋತ್ಸವ ಸಂಭ್ರಮ

ಮಕ್ಕಳ ಮೇಲೆ ಶಿಕ್ಷಕರ ಪ್ರಭಾವ ಬೀರಲಿದೆ - ಫಾದರ್ ಸ್ಟೀವನ್ ವೇಗಸ್

 

ಸೈಂಟ್ ಪೀಟರ್ ಶಾಲಾ ವಾರ್ಷಿಕೋತ್ಸವ ಸಂಭ್ರಮ

ಮಕ್ಕಳ ಮೇಲೆ ಶಿಕ್ಷಕರ ಪ್ರಭಾವ ಬೀರಲಿದೆ

Yadgiri, ಶಹಾಪುರಃ ಮಕ್ಕಳ ಮೇಲೆ ಪಾಲಕರದ್ದು ಎಷ್ಟು ಜವಬ್ದಾರಿ ಇದೆಯೋ ಅದಕ್ಕಿಂತ ಹೆಚ್ಚಿನ ಜವಬ್ದಾರಿ ಶಿಕ್ಷಕರದ್ದು ಇದೆ. ಯಾಕಂದ್ರೆ ಶಿಕ್ಷಕರ ಜತೆಯೆ ಮಕ್ಕಳು ದಿನದ ಹೆಚ್ಚಿನ ಸಮಯವನ್ನು ಕಳೆಯಲಿದ್ದಾರೆ. ಶಿಕ್ಷಕರ ನಡೆ, ನುಡಿಯನ್ನೆ ಮಕ್ಕಳು ಫಾಲೋ ಮಾಡುತ್ತಿರುತ್ತಾರೆ ಎಂಬ ಎಚ್ಚರಿಕೆ ಶಿಕ್ಷಕರಲ್ಲಿರಬೇಕು ಎಂದು ಫಾದರ್ ಸ್ಟೀವನ್ ವೇಗಸ್ ಹೇಳಿದರು.

ನಗರದ ಸೈಂಟ್ ಪೀಟರ್ ಶಾಲಾ ವಾರ್ಷಿಕೋತ್ಸವ ಹಾಗೂ ಶಾಂತಿ ಸೌಹಾರ್ಧ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಮೊದಲು ಮೌಲ್ಯಯುತ ಮಾರ್ಗವನ್ನು ಪಾಲನೆ ಮಾಡಬೇಕು. ಬೋಧನೆ ಮಾಡಿದಂತೆ ನಡೆದುಕೊಳ್ಳುತ್ತಿರಬೇಕು ಆಗ ಅದು ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಶಿಕ್ಷಕರನ್ನು ಮಾದರಿಯಾಗಿ ಅವರು ಕಂಡುಕೊಳ್ಳಲಿದ್ದಾರೆ.

ಪಾಲಕರದ್ದು ಸಹ ಅಷ್ಟೆ ಜವಬ್ದಾರಿ ಇರಲಿದೆ. ಮನೆಯಲ್ಲಿ ಮಕ್ಕಳಿಗೆ ಹೇಳುವ ನೀತಿ ಪಾಠದಂತೆ ತಾವೂ ನಡೆದುಕೊಳ್ಳುವದು ಬಹು ಮುಖ್ಯವಾಗಿದೆ. ಮನೆಯಲ್ಲಿ ಪಾಲಕರ ನಡತೆ, ರೀತಿ ವರ್ತನೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಸಕರಾತ್ಮಕವಾಗಿದ್ದರೆ ಅದು ಒಳ್ಳೆಯದು ಎಂದರು.

ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಧಾರ್ಮಿಕ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಇರಲಿದೆ. ಯಾವುದೇ ಧಾರ್ಮಿಕ ಶಿಕ್ಷಣ ಸಂಸ್ಥೆ ಇರಲಿ, ಹಿಂದೂ, ಮುಸ್ಲಿಂ ಅಥವಾ ಕ್ರೈಸ್ತ್, ಜೈನ್ ಯಾವುದೇ ಧಾರ್ಮಿಕ ಸಂಸ್ಥೆಗಳು ಸಂತ, ಸೋಫಿ, ಏಸು ಅವರ ಸತ್ಯ ಪ್ರತಿಪಾದನೆ, ಸಮಾನತೆ ದೇಶ ಭಕ್ತಿಯ ನೆಲೆಯಲ್ಲಿ ಮಕ್ಕಳು ರೂಪಗೊಳ್ಳಲಿದ್ದಾರೆ.

ಹೀಗಾಗಿ ಸೈಂಟ್ ಪೀಟರ್ ಶಾಲೆ ಏಸು ಸ್ವಾಮೀ ದೇವಾಲಯದ ಸಾನ್ನಿಧ್ಯದಲ್ಲಿ ಮಕ್ಕಳ ವಿದ್ಯಾಭ್ಯಾಸ ನಡೆದಿರುವದು ಮಕ್ಕಳಿಗೆ ವರವಾಗಲಿದೆ ಎಂದರು.

ಗೋಗಿ ಚಂದಾಹುಸೇನಿ ದರ್ಗಾದ ಶರೀಫ ಸಾಹೇಬ ಮಾತನಾಡಿ, ಸಾಕ್ಷಾತ್ ಶಕ್ತಿ ದೇವಿ ನೆಲಿಸಿರುವ ಈ ಪ್ರದೇಶದಲ್ಲಿ ಏಸು ಸ್ವಾಮಿ ಸಾನ್ನಿಧ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಸುಶಿಕ್ಷತರಾಗಿ ಶಾಲಾ ಮತ್ತು ಪಾಲಕರ ಕೀರ್ತಿ ಹೆಚ್ಚಿಸುವಂತರಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶೀಬಾ ಸಿಲಾಸ್, ಬಿಆರ್‍ಸಿ ರೇಣುಕಾ ಪಾಟೀಲ್, ಸಿಆರ್‍ಪಿ ಪ್ರಕಾಶ ಇಚ್ಚೂರ, ಶಾಲೆಯ ಪಿಟಿಎ ಸಮಿತಿ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಮುದ್ನೂರ, ಚರ್ಚ್ ಉಪಾಧ್ಯಕ್ಷರಾದ ಪ್ರಸಾದ ಹಾಗೂ ಸುರೇಶ ರಡ್ಡಿ ಸೇರಿದಂತೆ ಶಾಲಾ ಮುಖ್ಯಗುರು ಕ್ಲೀವನ್ ಡೊಮೆನಿಕ್ ಗೋಲಮ್ಸ್ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು.

Related Articles

Leave a Reply

Your email address will not be published. Required fields are marked *

Back to top button