ಪ್ರಮುಖ ಸುದ್ದಿ

ಶಹಾಪುರಃ ಸ್ವೀಟ್ ನಲ್ಲಿ ವಿಷ ಬೆರಕೆ ಆರೋಪ – ಥಳಿತ, ನಗರದಲ್ಲಿ ಗುಸು ಗುಸು ಚರ್ಚೆ‌

ಬಸವರಾಜ ಅರುಣಿ ಮೇಲೆ ಹಲ್ಲೆ ಯಾಕೆ ಗೊತ್ತಾ.?

ಶಹಾಪುರಃ ಸ್ವೀಟ್ ನಲ್ಲಿ ವಿಷ ಬೆರಕೆ ಆರೋಪ ಥಳಿತ

ಪೇಡಾದಲ್ಲಿ ವಿಷಃ ಆರೋಪ ವ್ಯಕ್ತಿಯೋರ್ವನಿಗೆ ಥಳಿತ, ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಅಧಿಕೃತ ಪ್ರಕರಣ ದಾಖಲಾಗಿಲ್ಲ.!

ಯಾದಗಿರಿಃ ಕಾಂಗ್ರೆಸ್ ಮುಖಂಡ ವಿಶ್ವನಾಥ‌ರಡ್ಡಿ ದರ್ಶನಾಪುರ ಎಂಬುವರಿಗೆ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಸವರಾಜ ಅರುಣಿ‌ ಎಂಬಾತ ಸ್ವೀಟ್ ವೊಂದರಲ್ಲಿ ವಿಷ ಬೆರೆಸಿ‌ ತಿನ್ನಿಸಲು ಮುಂದಾಗಿದ್ದ ಎಂದು ಆರೋಪಿಸಿ ಆತನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಶಹಾಪುರ ನಗರದಲ್ಲಿ ನಡೆದಿದೆ.

ಕಳೆದ ಕೆಲ ತಿಂಗಳಿಂದ ಸಹಕಾರಿ ಸಂಘದ ಜಿಲ್ಲಾ ಪ್ರವರ್ತಕ ಅಧ್ಯಕ್ಷರಾಗಲು ಅರುಣಿ ಮತ್ತು ವಿಶ್ವನಾಥ‌ ರಡ್ಡಿ ದರ್ಶನಾಪುರ ಮಧ್ಯ ಪೈಪೋಟಿ ನಡೆದಿದ್ದು,‌‌ ವಿಶ್ವನಾಥ ರಡ್ಡಿ ಅವರೇ ಅದರಲ್ಲಿ ಮೇಲುಗೈ ಸಾಧಿಸಿದ್ದರು. ಅಂದಿನಿಂದ‌ ಪರಸ್ಪರರ ನಡುವೆ ಕಂದಕ ಉಂಟಾಗಿತ್ತು ಎನ್ನಲಾಗಿದೆ.

ಆದರೆ ನಿನ್ನೆ ಸೋಮವಾರ ಅದ್ಯಾವ ಕಾರಣಕ್ಕೆ ವಿಶ್ವನಾಥ ರಡ್ಡಿ ಅವರ‌ ಮನೆಗೆ‌‌ ಬಸವರಾಜ ಅರುಣಿ ಹೋಗಿದ್ದರೋ ಗೊತ್ತಿಲ್ಲ.

ಆದರೆ‌ ಜನ‌ರ ಬಾಯಿ ಮಾತಿನ ಮೂಲಕ ಎಲ್ಲಡೆ ಕೇಳಿ ಬರುತ್ತಿರುವದು‌ ವಿಶ್ವನಾಥರಡ್ಡಿ ಜತೆ ಹೊಂದಾಣಿಕೆ ಮಾಡಿಕೊಂಡು ಸ್ಮೇಹಿತರಂತೆ ಇರಲು‌ ಮಾತು ಕತೆ ನಢೆದಿತ್ತು ಎನ್ನಲಾಗಿದೆ.

ಈ ವೇಳೆ‌ ಸಿಹಿ ಹಂಚಿಕೆ‌ ವೇಳೆ ಅರುಣಿ ತಂದಿಟ್ಟಿದ ಸ್ವೀಟ್ ಬಾಕ್ಸ್ ಕಾರಿನಲ್ಲಿ ಬಿಟ್ಟಿರುತ್ತಾರೆ. ಆ ಕಾರು ಅರುಣಿ ಅವರನ್ನು ಕರೆದುಕೊಂಡು ವಿಶ್ವನಾಥ ರಡ್ಡಿ ಅವರ ಮನೆಗೆ ಬಂದಿರುತ್ತದೆ.
ಅದೇ ಸ್ವೀಟ್ ಬಾಕ್ಸ್ ಬಿಟ್ಟಿದ್ದ ಅರುಣಿ ಅದನ್ನು ತರಲು ಎದ್ದೇಳುತ್ತಾನಂತೆ,‌ ಆಗ‌ ಸಾಮಾನ್ಯವಾಗಿ‌ ವಿಶ್ವನಾಥರಡ್ಡಿ‌ ಅವರು,‌ ತಮ್ಮ ಹುಡುಗನೊಬ್ಬನಿಗೆ‌ ಕಾರಿನಲ್ಲಿ‌ ಸ್ವೀಟ್‌ ಇದೆಯಂತೆ ತೆಗೆದಕೊಂಡು ಬಾ ಎಂದು ಸೂಚಿಸುತ್ತಾರಂತೆ, ಸ್ವೀಟ್ ತಂದು ಅರುಣಿ ಅವರ ಕೈಗೆ ಇಡಲಾಗುತ್ತದೆ. ಆಗ ಅರುಣಿ ಸ್ವೀಟ್ ನ್ನು ವಿಶ್ವನಾಥ ರಡ್ಡಿ ಆವರಿಗೆ ತಿನ್ನಿಸಲು ಮುಂದಾಗ್ತಾರೆ.

ಆದರೆ ವಿಶ್ವನಾಥ ರಡ್ಡಿ ಅವರ ಮೂಗಿಗೆ ಕೆಟ್ಟ ವಾಸನೆ ಬರಲಿದೆಯಂತೆ, ತಕ್ಷಣಕ್ಕೆ ಬೇಡ ಇದು ಸರಿಯಿಲ್ಲ ಏನೋ ವಾಸನೆ ಬರ್ತಿದೆ ಎಂದು ಚಕ್ ಮಾಡಲಾಗಿ,‌ ಏನಿದು ಎಂದು ಅರುಣಿ ಅವರನ್ನು ಪ್ರಶ್ನಿಸಿ ಗದರಿಸಲಾಗಿ, ಆತನ‌ ಮುಖದಲ್ಲಿ ಬೆವರು‌ ಬಂದು‌ ಆತ ತೊದಲುತ್ತಾನೆ. ಆಗ ಅಲಿದ್ದ ಎಲ್ಲರೂ ಕೋಪಗೊಂಡು ಥಳಿಸಿದ್ದಾರೆ ಎನ್ನಲಾಗಿದೆ.

ಅರುಣಿ ಯವರನ್ನು ಥಳಿಸಿ ಅಂಗಿ ಪ್ಯಾಂಟು ಬಿಚ್ಚಿ ಅರೆಬರೆ ಬಟ್ಟೆಯಲ್ಲಿ ಆತನನ್ನು ಹಿಡಿದು ನಿಂತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ‌ ಹರಿದಾಡುತ್ತಿವೆ.

ಅರುಣಿಯವರನ್ನು ಪೊಲೀಸರು ಠಾಣೆಗೆ ಕರೆ ತಂದು ವಿಚಾರಿಸಲಾಗಿ,‌ ಆತ ನಾನು ವಿಷ‌ಬೆರೆಸಿರುವದಿಲ್ಲ ಅದ್ಹೇಗೆ ವಿಷ ಹಾಕುವೆ ಇದೆಲ್ಲ ಸುಳ್ಳು ಎಂದು ಪೊಲೀಸರ‌ ಮುಂದೆ ಹೇಳಿಕೆ ನೀಡಿರುವದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಆದರೆ‌ ಈ ಕುರಿತು ಅಧಿಕೃತ ಪ್ರಕರಣ ದಾಖಲಾಗಿರುವದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಅರುಣಿ ಮೇಲೆ ಹಲ್ಲೆ ನಡೆದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಪರ ವಿರೋಧ ಚರ್ಚೆ ನಡೆದಿದೆ.

ಆದರೆ ಅರುಣಿ ಅವರನ್ನು ಕರೆ ತಂದವರಾರು.? ಆ ಕಾರಿನಲ್ಲಿಟ್ಟ ಸ್ವೀಟ್ ಎಲ್ಲಿಂದ ತಂದಿದ್ದರು.? ಸ್ವೀಟ್ ಮೇಲೆ ವಾಸನೆ ಬರುವಂತ ವಿಷ ಹೇಗೆ ಯಾರು ಹಾಕಲಾಯಿತು.? ಎಂಬುದರ ಕುರಿತು ನಿಗೂಢವಾಗಿದೆ. ಅರುಣಿ ಮೇಲೆ ನಡೆದದ್ದು ದೌರ್ಜನ್ಯವಾ.? ಅಸಲಿಗೆ ಸ್ವೀಟ್ ನಲ್ಲಿ‌ರೋದು ವಿಷವಾ.? ಅದು poison  ವಾಸನೆನಾ.? ಇದೆಲ್ಲದಕ್ಕೂ ಉತ್ತರ ಪೊಲೀಸರ ತನಿಖೆಯಿಂದಲೇ ಸತ್ಯಾಸತ್ಯತೆ ಹೊರ ಬರಬೇಕಿದೆ. ಆದರೆ ವಿಚಿತ್ರವೆಂದರೆ…

ಸೋಮವಾರ ರಾತ್ರಿ 11-30 ಆದರೂ ಯಾವುದೇ ಪ್ರಕರಣ ದಾಖಲಾಗಿರುವದಿಲ್ಲ. ಘಟನೆ ಕುರಿತು ನಗರದಲ್ಲಿ ಪರ ವಿರೋಧ ಬಿಸಿ‌ ಬಿಸಿ‌ ಗುಸುಗುಸು ಚರ್ಚೆ ಮಾತ್ರ ನಿಂತಿಲ್ಲ.

Related Articles

Leave a Reply

Your email address will not be published. Required fields are marked *

Back to top button