ಸಂಗೀತ ಆಲಿಸುವದರಿಂದ ಮನಸ್ಸಿಗೆ ನೆಮ್ಮದಿ – ಸಿದ್ದಣ್ಣ ಸಾಹು ಆರಬೋಳ
ಗಾನ ಕುಸುಮ ಸಾಂಸ್ಕೃತಿಕ ಸಂಗೀತ ಕಲಾ ಸಂಸ್ಥೆ ಉದ್ಘಾಟನೆ
ಗಾನ ಕುಸುಮ ಸಾಂಸ್ಕೃತಿಕ ತಿಕ ಸಂಗೀತ ಕಲಾ ಸಂಸ್ಥೆ ಉದ್ಘಾಟನೆ
ಗಾನ ಕೇಳುವದರಿಂದ ಮನಸ್ಸಿಗೆ ನೆಮ್ಮದಿ
yadgiri, ಶಹಾಪುರಃ ಸಂಗೀತ ಆಲಿಸುವದರಿಂದ ಮನಸ್ಸಿಗೆ ನೆಮ್ಮದಿ, ಸಮಾಧಾನ ಸಿಗಲಿದೆ ಅಲ್ಲದೆ ದೇಹದಲ್ಲಿ ಚೈತನ್ಯ ತುಂಬಿ ತುಳುಕಲಿದೆ. ಹೀಗಾಗಿ ಮನುಷ್ಯ ಬೇಸರವಾದಾಗ ಸಂಗೀತ ಆಲಿಸುತ್ತಾನೆ ಎಂದು ನಗರಸಭೆ ಸದಸ್ಯ ಸಿದ್ದಣ್ಣ ಸಾಹು ಆರಬೋಳ ಹೇಳಿದರು.
ನಗರದ ಗುತ್ತಿಪೇಠ (ಸವಿತಾ ಸಮಾಜ ಓಣಿ) ದಲ್ಲಿ ನಡೆದ ಗಾನ ಕುಸುಮ ಸಾಂಸ್ಕೃತಿಕ ಸಂಗೀತ ಕಲಾ ಸಂಸ್ಥೆ ಉದ್ಘಾಟನೆ ಹಾಗೂ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಗೀತ ಆಲಿಸದ ಅಥವಾ ಹಾಡು ಕೇಳದೆ ಬಹು ದೂರ ಇರುವ ಸಂಗೀತ ಅಂದರೆ ಇಷ್ಟ ಪಡದ ಯಾರಾದರೂ ಜಗತ್ತಿನಲ್ಲಿ ಸಿಗಲು ಸಾಧ್ಯವೇ.? ಮೊದಲು ಸಂಗೀತ, ಹಾಡು, ಪಾರಂಪರಿಕವಾಗಿ ಕಲಾವಿದನ ಮೂಲಕ ಜಾನಪದ ಸಾಹಿತ್ಯ, ಸಂಗೀತ ಊರಿನಿಂದ ಊರಿಗೆ ಕಲಾವಿದರ ಮೂಲಕವೇ ತಲುಪುತ್ತಿತ್ತು.
ಆದರೆ ಪ್ರಸ್ತುತ ಕಾಲದಲ್ಲಿ ತಾಂತ್ರಿಕವಾಗಿ ಬಳಷ್ಟು ಮುಂದುವರೆದಿರುವದರಿಂದ ರೇಡಿಯೋ, ಟೇಪ್ ಅಧ್ಯಾಯ ಮುಗಿದು ಈಗ ಕೈಯಲ್ಲಿರುವ ಮೊಬೈಲ್ ಸಾಧನ ಮೂಲಕವೇ ಸುಲಭವಾಗಿ ಬೇಕಾದ ಸಂಗೀತ, ಹಾಡು ಇವೆಲ್ಲವನ್ನು ಆಸ್ವಾಧಿಸಬಹುದು.
ಆದರೂ ಲೈವ್ ಆಗಿ ಸಂಗೀತ, ಹಾಡು ಕೇಳುವ ಅಭಿರುಚಿ ಕಡಿಮೆಯಾಗಿಲ್ಲ. ಇಂತಹ ಪಾರಂಪರಿಕ ಸಂಗೀತ, ಈ ನಾಡಿನ ಸಾಂಸ್ಕøತಿ ಉಳಿಯಲು ಇಂತಹ ಕಲಾ ಸಾಂಸ್ಕøತಿಕ ಸಂಘಟನೆ ಸಂಸ್ಥೆ ಅಗತ್ಯವಿದೆ ಎಂದರು.
ಮುಖಂಡ ರುದ್ರಣ್ಣ ಚಟ್ರಿಕಿ ಮಾತನಾಡಿದರು. ರಮೇಶ ಮಾಡಗಿ, ಬಸನಗೌಡ ಮಾಡಗಿ, ಶರಣಗೌಡ ಮಾಡಗಿ, ವೆಂಕಟೇಶ ಗೌನಳ್ಳಿ, ಶಿವಪ್ಪ ಹುಣಸಿಗಿಡ, ರಾಘವೇಂದ್ರ ಹಳಿಪೇಟ, ನಾಗರಾಜ್ ಹಳಿಪೇಟ್ ಉಪಸ್ಥಿತರಿದ್ದರು. ಖ್ಯಾತ ಸಂಗೀತಗಾರ ಶರಣಕುಮಾರ ವಠಾರ ಹಾಗೂ ಧನುಶ್ರೀ ಅವರ ಪ್ರಾಥನೆ ಗೀತೆ ಹಾಡಿದರು. ಸಂಸ್ಥೆಯ ಅಧ್ಯಕ್ಷ ಗುರುಪಾದ ಹುಣಸಿಗಿಡ ಅಧ್ಯಕ್ಷತೆವಹಿಸಿದ್ದರು. ಅಶೋಕ ಇಟಗಿ ನಿರೂಪಿಸಿ ವಂದಿಸಿದರು.