ಕಲರ್ಸ್ ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಈ ಬಾರಿ BIGG BOSS ಕನ್ನಡ ಸೀಸನ್ 9 – 2022 ಟಾಪ್ 5 ಫೈನಲಿಸ್ಟ್ಗಳೊಂದಿಗೆ ಗ್ರ್ಯಾಂಡ್ ಫಿನಾಲೆ ನಿನ್ನೆಯಿಂದ ನಡೆದಿದ್ದು, ಇಂದು ರಾತ್ರಿ 11-30 ಅಥವಾ 12 ಗಂಟೆಯೊಳಗೆ ಫೈನಲ್ ಟ್ರೋಫಿ ಯಾರ ಕೈಯಿಗೆ ಸೇರಲಿದೆ ಎಂಬುವ ಸುದ್ದಿ ಹೊರಬೀಳಲಿದೆ. ಅದಕ್ಕೆ ಇನ್ನೂ ಕೆಲವೇ ಗಂಟೆ ಕಾಯಬೇಕಿದೆ ಅಷ್ಟೆ.
ಬಿಗ್ ಬಾಸ್ 9 ರ ಕನ್ನಡ ಸೀಸನ್ ನಲ್ಲಿ ಈ ಬಾರಿ ಆರಂಭದಲ್ಲಿ 18 ಸ್ಪರ್ಧಿಗಳೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು.
ಈಗ 2-ದಿನದ ಗ್ರ್ಯಾಂಡ್ ಫಿನಾಲೆಯಲ್ಲಿ ಅಗ್ರ 5 ಫೈನಲಿಸ್ಟ್ಗಳೊಂದಿಗೆ ಇಂದು 4 ಸ್ಪರ್ಧಿಗಳ ಪ್ರದರ್ಶನವು ತನ್ನ ಕ್ಲೈಮ್ಯಾಕ್ಸ್ ಅನ್ನು ತಲುಪಿದೆ. ಫೈನಲ್ ಗೆಲುವು ಯಾರ ಪಾಲಾಗಲಿದೆ ಎಂಬುದನ್ನು ಬಿಗ್ ಬಾಸ್ ಫೈನಲ್ ವೀಕ್ಷಕರು ಮೆಸೆಜ್ ಮೂಲಕ ಈ ಕೂಡಲೇ ತಿಳಿಸುವಂತೆ ವಿನಯವಾಣಿ ತಮ್ಮೆಲ್ಲರಲ್ಲಿ ಮನವಿ ಮಾಡುತ್ತದೆ.
–ಸಂ