ಮೇ.5 ರಂದು ಶಹಾಪುರಕ್ಕೆ ಸಿ.ಎಂ.ಇಬ್ರಾಹಿಂ
ನಾಡಿದ್ದು ನಗರಕ್ಕೆ ಸಿಎಂ ಇಬ್ರಾಹಿಂ
ಶಹಾಪುರಃ ಇದೇ ಮೇ.೫ ಶುಕ್ರವಾರ ದಂದು ನಗರಕ್ಕೆ ಜೆಡಿಎಸ್ ರಾಜ್ಯಧ್ಯಕ್ಷ ಸಿ.ಎಂ.ಇಬ್ರಾಹಿಂ ಆಗಮಿಸಲಿದ್ದು, ಅಂದು ಬೆಳಗ್ಗೆ ೯:೩೦ ಕ್ಕೆ ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ಜೆಡಿಎಸ್ ಬಹಿರಂಗ ಪ್ರಚಾರ ಸಭೆ ನಡೆಯಲಿದೆ ಎಂದು ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಗುರು ಪಾಟೀಲ್ ಶಿರವಾಳ ಪರ ಮತಯಾಚನೆ ನಿಮಿತ್ತ ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಅವರು ಮಾತನಾಡಲಿದ್ದು, ಕಾರ್ಯಕರ್ತರು ಶಿರವಾಳ ಮನೆತನದ ಅಭಿಮಾನಿಗಳು ಹಾಗೂ ವಿಶೇಷವಾಗಿ ಅಲ್ಪಸಂಖ್ಯಾತ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.