ಗ್ರಾಮೀಣ ಪ್ರತಿಭೆಗಳಿಂದ ರಂಗಭೂಮಿ ಜೀವಂತ
ರಂಗಶ್ರೀಮಣಿ ಸಾಂಸ್ಕೃತಿಕ ಕಲಾ ಸಂಘ ಉದ್ಘಾಟನೆ
yadgiri, ಶಹಾಪುರಃ ದೇಶದ ಪರಂಪರೆ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಕಾರ್ಯ ಚಟುವಟಿಕೆಗಳು ಅಗತ್ಯವಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಪ್ರತಿಭಾವಂತ ಕಲಾವಿದರಿಗೆ ಉತ್ತಮ ವೇದಿಕೆಯಾಗಿ ಈ ನೂತನ ರಂಗಶ್ರೀಮಣಿ ಸಾಂಸ್ಕøತಿಕ ಕಲಾ ಸಂಘ ಕಾರ್ಯನಿರ್ವಹಿಸಲಿ ಎಂದು ಶಹಾಪುರ ಬಿಡಿಎಂ ಕಾಲೇಜು ಪ್ರಾಂಶುಪಾಲ ಶಿವಲಿಂಗಣ್ಣ ಸಾಹು ತಿಳಿಸಿದರು.
ತಾಲೂಕಿನ ದೋರನಹಳ್ಳಿ ಗ್ರಾಮದ ಶ್ರೀಶಾಂಭವಿಮಾತಾ ಚಿಕ್ಕಮಠದಲ್ಲಿ ರಂಗಶ್ರೀಮಣಿ ಸಾಂಸ್ಕøತಿಕ ಕಲಾ ಸಂಘ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಂಸ್ಕøತಿಕ ಸಂಘ ಸಂಸ್ಥೆಗಳು ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸುವ ಮೂಲಕ ಅವರಲ್ಲಿದ್ದ ಪ್ರತಿಭೆಯನ್ನು ಸೂಸವ ಕೆಲಸ ಮಾಡಬೇಕಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕಲಾವಿದರಿದ್ದು, ಅಂತವರನ್ನು ಪ್ರೋತ್ಸಾಹಿಸಿ ಬೆಳೆಸುವ ಕಾರ್ಯ ಮಾಡಬೇಕಿದೆ.
ರಂಗಭೂಮಿಯೊಂದು ಉತ್ತಮ ಮಾಧ್ಯಮ ಕ್ಷೇತ್ರ ಎಂದರೆ ತಪ್ಪಾಗಲಾರದು. ಹಿಂದೆ ರಂಗಭೂಮಿ ಮೂಲಕ ಸ್ವಾತಂತ್ರ್ಯ ಹೋರಾಟದ ಕಥಾನಕ ಹಾಗೂ ರಾಮಾಯಣ, ಮಹಾಭಾರತದಂತ ಕಥಾ ಸ್ವರೂಪವನ್ನು ಜನರ ಮನದಲ್ಲಿ ಮೂಡುವಂತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಪ್ರಸ್ತುತ ಕಾಲದಲ್ಲಿ ಅಂತಹ ನಾಟಕ, ಬಯಲಾಟ, ಡಪ್ಪಿನಾಟದಂತ ಕಥಾ ಸಾರಂಶ ಕಂಡು ಬರುತ್ತಿಲ್ಲ ಎಂದು ವಿಷಾಧಿಸಿದರು.
ಕಲಾವಿದರು ನಾಡಿನ ಸಂಸ್ಕøತಿ, ಕಲೆ, ಸಾಹಿತ್ಯ ಆಚಾರ ವಿಚಾರ ಸಾಂಪ್ರದಾಯ ಪಾರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾಗಿಯಾಗಬೇಕಿದೆ. ಆ ನಿಟ್ಟಿನಲ್ಲಿ ಎಲ್ಲರು ತನುಮನಧನದಿಂದ ಸಹಕರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ, ಯಾವುದೇ ಸಂಘ ಸಂಸ್ಥೆ ಕಟ್ಟುವುದು ಸುಲಭ ಆದರೆ ಅದರ ನಿರ್ವಹಣೆ ಬಹಳ ಕಷ್ಟವಾಗಿರುತ್ತದೆ. ಉತ್ತಮ ಕಾರ್ಯಗಳು ಕೈಗೊಂಡಾಗ ಸಾಕಷ್ಟು ಅಡೆತಡೆ ಬರುವದು ಸಹಜ. ಎದುರಾದ ಸಮಸ್ಯೆಗಳನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕು. ಆಗ ಸಂಘ ಸಂಸ್ಥೆ ಎತ್ತರಕ್ಕೆ ಬೆಳೆದು ನಿಲ್ಲಲಿದೆ ಎಂದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಡಾ.ಆನಂದಕುಮಾರ ಗುತ್ತೇದಾರ, ಡಿಸಿಸಿ ಬ್ಯಾಂಕ್ ಉಪ ವ್ಯವಸ್ಥಾಪಕ ರಮೇಶ ನಗನೂರ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯದರ್ಶಿ ಅಯ್ಯಪ್ಪ ದೊರೆ ಮಾತನಾಡಿದರು. ಸಂಗೀತ ಕಲಾವಿದ ಬೂದಯ್ಯ ಹಿರೇಮಠ ಅನಿಸಿಕೆ ಹಂಚಿಕೊಂಡರು. ಡಿಡಿಯು ಕಾಲೇಜಿನ ಪ್ರಾಂಶುಪಾಲ ಮಹೇಶ ಪತ್ತಾರ ನಿರೂಪಿಸಿದರು. ಶ್ರೀನಿವಾಸ ರಂಗಯಣ ವಂದಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿಭಾವಂತ ಕಲಾವಿದರನ್ನು ಮತ್ತು ಕ್ರೀಡಾ ಪಟುಗಳನ್ನು ಬೆಳೆಸುವಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ. ರಾಜಕೀಯ ನಾಯಕರು ನಮ್ಮ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿ ಪ್ರೋತ್ಸಾಹ ನೀಡಿದ್ದಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲಿದ್ದಾರೆ. ಆ ಕೆಲಸ ನಮ್ಮ ಭಾಗದ ನಾಯಕರು ಮಾಡಬೇಕಿದೆ. ಅಲ್ಲದೆ ನಮ್ಮಲ್ಲಿ ಕನ್ಯಾಕೋಳೂರಿನ ಕೋಳೂರು ಕೊಡಗೂಸು, ಸುಕ್ಷೇತ್ರ ಸನ್ನತಿ ಚಂದ್ರಲಾಂಬೆ ಸೇರಿದಂತೆ ಸಾಕಷ್ಟು ಐತಿಹ್ಯ ಹೊಂದಿದ ಪುಣ್ಯ ಕ್ಷೇತ್ರಗಳು ಇದ್ದು ಅವುಗಳನ್ನು ಪ್ರಚುರ ಪಡಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ ನಾವೆಲ್ಲ ಹಿಂದುಳಿದಿದ್ದೇವೆ. ಮಲೆನಾಡು ಭಾಗದಲ್ಲಿ ಇದ್ದರೆ ಬಹು ದೊಡ್ಡ ಮಟ್ಟದ ಪ್ರವಾಸಿ ಕ್ಷೇತ್ರಗಳಾಗಿ ಬೆಳೆಯುತ್ತಿದ್ದವು. ಆ ಭಾಗದ ನಾಯಕರಿಗಿದ್ದ ಇಚ್ಛಾ ಶಕ್ತಿ ನಮ್ಮ ಭಾಗದಲ್ಲಿ ಇಲ್ಲ.
–ಮಲ್ಲಿಕಾರ್ಜುನ ಮುದ್ನೂರ. ಕಾನಿಪ ಅಧ್ಯಕ್ಷರು ಶಹಾಪುರ.