ಪ್ರಮುಖ ಸುದ್ದಿ
ಡೈವೋರ್ಸ್ ಪ್ರಕ್ರಿಯೇ ಮುಗಿದ ಮೇಲೂ ಆಕೆಗೂ ಒಂದೊಳ್ಳೆಯ ಬದುಕು ಸಿಗಲಿ ಎಂದ ‘ಕೀರ್ತಿ’
ಪತ್ನಿಗೆ ಡೈವೋರ್ಸ್ ನೀಡಿದ ನಟ ಕಿರಿಕ್ ಕೀರ್ತಿ
ಪತ್ನಿಗೆ ಡೈವೋರ್ಸ್ ನೀಡಿದ ನಟ ಕಿರಿಕ್ ಕೀರ್ತಿ – FB ಯಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡ ಕೀರ್ತಿ
ಡೈವೋರ್ಸ್ ಪ್ರಕ್ರಿಯೇ ಮುಗಿದ ಮೇಲೂ ಆಕೆಗೂ ಒಂದೊಳ್ಳೆಯ ಬದುಕು ಸಿಗಲಿ ಎಂದ ‘ಕೀರ್ತಿ’
ವಿವಿ ಡೆಸ್ಕ್ಃ ಬಿಗ್ ಬಾಸ್ ಸೀಸನ್ – 4 ನಲ್ಲಿ ಕನ್ನಡಿಗ ಕಿರಿಕ್ ಕೀರ್ತಿ ಎಂದೆ ಮಿಂಚಿದ್ದ ಕಿರಿಕ್ ಕೀರ್ತಿ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡ ಮಾಹಿತಿ ದೊರೆತಿದೆ.
ಸ್ವತಃ ಕೀರ್ತಿ ಅವರೇ ಈ ಕುರಿತು ಸಾಮಾಜಿಕ ಜಾಲ ತಾಣ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಅವರು,
ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ, ಅಧಿಕೃತವಾಗಿ ಇನ್ನು ಮುಂದೆ ಕರಿಮಣಿ ಮಾಲೀಕ ನಾನಲ್ಲ.
ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ. ಕಹಿ ನೆನಪುಗಳು ಮರೆತು ಹೊಸ ಜೀವನಕ್ಕೆ ನಾಂದಿ ಹಾಡಲಿ. ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರೆಯಲಿ ಎಂದು ಕಿರಿಕ್ ಕೀರ್ತಿ ಅವರು ಪೋಸ್ಟ್ ಹಾಕಿದ್ದಾರೆ.