ಪ್ರಮುಖ ಸುದ್ದಿಸಂಸ್ಕೃತಿ

ಹಿರೇಮಠ ಕುಂಬಾರ ಓಣಿಯಲ್ಲಿ ಅ.15 ರಿಂದ ದಸರಾ ಮಹೋತ್ಸವ

ಅ.15 ರಿಂದ ನಾಡಹಬ್ಬ ದಸರಾ ಮಹೋತ್ಸವ

ಅ.15 ರಿಂದ ನಾಡಹಬ್ಬ ದಸರಾ ಮಹೋತ್ಸವ

ಹಿರೇಮಠ ಕುಂಬಾರ ಓಣಿಯಲ್ಲಿ ದಸರಾ ಮಹೋತ್ಸವ

yadgiri, ಶಹಾಪುರಃ ನಾಡ ಹಬ್ಬ ದಸರಾ ಮಹೋತ್ಸವ ಅಂಗವಾಗಿ ನಗರ ಕುಂಬಾರ ಓಣಿಯ ಹಿರೇಮಠದಲ್ಲಿ ಅ.15 ರಿಂದ 23ರವರೆಗೆ ನಿತ್ಯ ವೈರಾಗ್ಯ ನಿಧಿ ಅಕ್ಕಮಹಾದೇವಿ ಚರಿತಾಮೃತ ಪ್ರವಚನ ಜರುಗಲಿದ್ದು, ಜತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಗುರು ರಕ್ಷೆ ನೀಡಲಿದ್ದು, ದಸರಾ ಮಹೋತ್ಸವ ಅಂಗವಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು ಸಾಂಘಿಕವಾಗಿ ನಡೆಯಲಿದ್ದು ಶ್ರೀಮಠದ ಸೂಗೂರೇಶ್ವರ ಶಿವಾಚಾರ್ಯರು ನೇತೃತ್ವವಹಿಸಲಿದ್ದಾರೆ ಎಂದು ಹಿರೇಮಠ ನಾಡಹಬ್ಬ ದಸರಾ ಮಹೋತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಅ.22 ರಂದು ಸಂಜೆ ಬೆಳಗ್ಗೆ 11ಃ30 ಕ್ಕೆ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಅಂದಿನ ಕಾರ್ಯಕ್ರಮಕ್ಕೆ ಡಾ.ದಾಕ್ಷಾಯಿಣಿ ಎಸ್.ಅಪ್ಪಾ ಶರಣಬಸವೇಶ್ವರ ಸಂಸ್ಥಾನ ಕಲಬುರ್ಗಿ ಇವರು ಚಾಲನೆ ನೀಡಲಿದ್ದಾರೆ. ಭಾರತಿ ಎಸ್.ದರ್ಶನಾಪುರ ಮತ್ತು ಡಾ.ದಾಕ್ಷಾಯಿಣಿ ಪಾಟೀಲ್ ಶಿರವಾಳ ಉಪಸ್ಥಿತರಿರಲಿದ್ದಾರೆ. ಅ.23 ರಂದು ಅಕ್ಕಮಹಾದೇವಿ ಚರಿತ್ರಾಮೃತ ಸಮಾರೋಪ ಸಮಾರಂಭ ಜರುಗಲಿದೆ. ಅಂದಿನನೃತೃತ್ವ ಸೂಗೂರೇಶ್ವರ ಶಿವಾಚಾರ್ಯರು ವಹಿಸಲಿದ್ದು, ಇಲಕಲ್ ಪಂಡಿತ ಅನ್ನದಾನ ಶಾಸ್ತ್ರಿಗಳು ಮಂಗಲ ನುಡಿಯಲಿದ್ದಾರೆ ಎಂದು ಸಮಿತಿ ತಿಳಿಸಿದ್ದಾರೆ. ನಿತ್ಯ ಜರುಗುವ ಪ್ರವಚನ ವೇಳೆ ಈಗಾಗಲೇ ತಿಳಿಸಲಾದ ಮಹನೀಯರಿಗೆ ಗುರು ರಕ್ಷೆ ಆಶೀರ್ವಾದ ನೀಡಲಾಗುವದು ಎಂದು
——————

Related Articles

Leave a Reply

Your email address will not be published. Required fields are marked *

Back to top button