ಪತ್ರಕರ್ತ ಪೋಲಂಪಲ್ಲಿಗೆ ಪರಿಸರ ಜೀವರಕ್ಷಕ ಪ್ರಶಸ್ತಿ
ಪೋಲಂಪಲ್ಲಿಗೆ ಪರಿಸರ ಜೀವರಕ್ಷಕ ಪ್ರಶಸ್ತಿ
yadgiri, ಶಹಾಪುರಃ ನಗರದ ಪತ್ರಕರ್ತ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ಹುಬ್ಬಳ್ಳಿಯ ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ಕೊಡ ಮಾಡಿದ ವಿಶ್ವ ಪರಿಸರ ಜೀವರಕ್ಷಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಇಲಕಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸತ್ಕರಿಸಿದೆ. ಜತೆಗೆ ಮಾಧ್ಯಮದ ಸೇವೆಯೂ ಗುರುತಿಸಿ ಮಾಧ್ಯಮ ಸೇವೆ ಪ್ರಶಸ್ತಿಗೂ ಭಾಜನರಾಗಿದ್ದಾರೆ.
ಶಹಾಪುರದಲ್ಲಿ ಉರಗ ರಕ್ಷಿಸುವದರಲ್ಲಿ ಹೆಸರು ವಾಸಿಯಾದ ಪತ್ರಕರ್ತ ಮಲ್ಲಯ್ಯ ಪೋಲಂಪಲ್ಲಿ ಅವರ ಸೇವೆ ಅಪೂರ್ವವಾಗಿದೆ. ತಾಲೂಕಿನಲ್ಲಿ ಎಲ್ಲಿಯೇ ಹಾವು ಮನೆಯೊಳಗೆ ನುಗ್ಗಿದೆ ಅಂದರೆ ಅವರಿಗೆ ಕರೆ ಹೋಗುತ್ತದೆ. ತಕ್ಷಣಕ್ಕೆ ಆಗಮಿಸುವ ಅವರು ತಮ್ಮ ಜೀವದ ಹಂಗು ತೊರೆದು ಹಾವು ಹಿಡಿಯುವ ಮೂಲಕ ಅದನ್ನು ದೂರದ ಅಡವಿಯಲ್ಲಿ ಬಿಡುತ್ತಾರೆ. ಇದುವರೆಗೂ ಸಾವಿರಾರು ಹಾವುಗಳನ್ನು ಅವರು ಹಿಡಿದಿರುತ್ತಾರೆ. ಒಂದೆರೆಡು ಬಾರಿ ಹಾವು ಹಿಡಿಯುವಾಗ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾದ ಉದಾಹರಣೆಗಳು ಸಹ ಇವೆ.
ಒಟ್ಟಾರೆ ಅವರ ಈ ಸೇವೆ ಅಮೋಘವಾಗಿದೆ.
ಇದನ್ನು ಗುರುತಿಸಿದ ವಿಶ್ವ ದರ್ಶನ ಕನ್ನಡ ದಿನ ಪತ್ರಿಕೆ ವಿಶ್ವ ಪರಿಸರ ಜೀವ ರಕ್ಷಕ ಪ್ರಶಸ್ತಿ ನೀಡಿರುವದು ಸೂಕ್ತವಾಗಿದೆ ಎಂದು ಕಾನಿಪ ಅಧ್ಯಕ್ಷ ಮಲ್ಲಿಕಾರ್ಜುನ ಮುದ್ನೂರ ಹಾಗೂ ಸ್ನೇಹ ಬಳಗದ ಎಕ್ಬಾಲ್ ಲಾಹೋರಿ, ಪತ್ರಕರ್ತ ಬಸವರಾಜ ಕರೇಗಾರ ಇತರರು ಅಭಿನಂದನೆ ಸಲ್ಲಿಸಿದ್ದಾರೆ.
—————-