ಪೇದೆಯಿಂದ ದಲಿತ ಮುಖಂಡನಿಗೆ ಅವಮಾನ – ಠಾಣೆ ಮುಂದೆ ಧರಣಿ
ಠಾಣೆ ಪೇದೆಯಿಂದ ದಲಿತ ಮುಖಂಡನಿಗೆ ಅವಮಾನ, ಪೇದೆ ವರ್ಗಾವಣೆಗೆ ಆಗ್ರಹ
ಠಾಣೆ ಪೇದೆಯಿಂದ ದಲಿತ ಮುಖಂಡನಿಗೆ ಅವಮಾನ ಧರಣಿ
ದಲಿತ ಮುಖಂಡನನ್ನು ಅವಮಾನಿಸಿದ ಪೇದೆ ವರ್ಗಾವಣೆಗೆ ಒತ್ತಾಯ
yadgiri, ಶಹಾಪುರಃ ಹಳಿಸಗರ ಗ್ರಾಮದ ಸಮಸ್ಯೆಯೊಂದರ ಕುರಿತು ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಲು ಠಾಣೆಗೆ ಆಗಮಿಸಿದ ದಲಿತ ಮುಖಂಡ ಶಾಂತಪ್ಪ ಕಟ್ಟಿಮನಿ ಅವರನ್ನು ಠಾಣೆಯ ಪೊಲೀಸ್ ಪೇದೆಯೋರ್ವ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬಾಯಿಗೆ ಬಂದಂತೆ ಮಾತನಾಡಿರುವ ಹಿನ್ನೆಲೆ ಮಂಗಳವಾರ ನಗರ ಪೊಲೀಸ್ ಠಾಣೆ ಎದುರು ಮಾದಿಗ ಮೀಸಲಾತಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ವಾಸುದೇವ ಕಟ್ಟಿಮನಿ, ದಲಿತ ಮುಖಂಡ ಹಲವಾರು ವರ್ಷಗಳಿಂದ ಹಳಿಸಗರ ಸೇರಿದಂತೆ ತಾಲೂಕಿನ ಮಾದಿಗ ಸಮಾಜದ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಕಾಳಜಿಪೂರ್ವಕ ಕೆಲಸ ಮಾಡುವಂತ ನಾಯಕರಾಗಿದ್ದು, ಇಡಿ ತಾಲೂಕಿಗೆ ಗೊತ್ತಿರುವ ವಿಷಯ. ಸೋಮವಾರ ರಾತ್ರಿ ಸಮಾಜದ ಸಮಸ್ಯೆವೊಂದು ತಲೆದೋರಿದ್ದು, ಅವರಿಗೆ ಸಮಾಜದವರು ಕರೆ ಬಂದ ಹಿನ್ನೆಲೆ ಠಾಣೆಗೆ ನಡೆಯಿರಿ ಬರುತ್ತೇನೆ ಅಲ್ಲೇ ಬಗೆಹರಿಸೋಣವೆಂದು ಆಗಮಿಸಿದ ವೇಳೆ ಠಾಣೆಯ ಗೋಪಾಲ ಎಂಬ ಪೇದೆ ಬಾಯಿಗೆ ಬಂದಂತೆ ಮಾತನಾಡಿದ್ದು, ಅಲ್ಲದೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಠಾಣೆಯ ನಿರ್ವಹಣೆ ಹದಗೆಡುತ್ತಿದೆ. ನ್ಯಾಯ ಕೇಳಲು ಬರುವ ಜನರು ಠಾಣೆಯ ಇಂತಹ ಪೇದೆ ಹೆಸರಿನ ಗುಂಡಾಗಿರಿ ಕಂಡು ರೋಸಿ ಹೋಗಿದ್ದಾರೆ. ಠಾಣೆಗೆ ಬಡವರು, ಶೋಷಿತರು ಬರಲು ಭಯಭೀತರಾಗಿದ್ದಾರೆ. ಇಂತವರನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಶಹಾಪುರ ಬಂದ್ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪೇದೆಯನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಮನವಿ ಪತ್ರವನ್ನು ಸಲ್ಲಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ಭೀಮರಾಯ ಕಾಂಗ್ರೆಸ್, ಮಾನಪ್ಪ ದಿವಳಗುಡ್ಡ, ಬಸವರಾಜ ನಾಯ್ಕಲ್, ವೆಂಕಟೇಶ ಆಲೂರ, ವಿಜಯಕುಮಾರ ಎದುರಮನಿ, ಸುನೀಲ ಹಳಿಸಗರ, ಭೀಮಾಶಂಕರ ಕಟ್ಟಿಮನಿ, ಭೀಮರಾಯ ಕದರಾಪುರ, ರವಿಚಂದ್ರ ಎದುರಮನಿ, ಲಕ್ಷ್ಮಣ ಶೆಟ್ಟಿ, ಮಲ್ಲು ಬಡಿಗೇರ, ಧರ್ಮಣ್ಣ ನಾಟೇಕಾರ, ನಾಗರಾಜ ಹುಲಿಮನಿ, ಹಣಮಂತ ದೊಡ್ಡಮನಿ, ಶಿವಕುಮಾರ ದೊಡ್ಮನಿ, ಪ್ರದೀಪ ಅಣಬಿ, ತಾಯಪ್ಪ ಶಾಸ್ತ್ರಿ, ಮಲ್ಲಿಕಾರ್ಜುನ ಗುಡ್ಡೆನೋರ, ಹುಸನಪ್ಪ ಕಟ್ಟಿಮನಿ, ಭೀಮರಾಯ ಬಡಿಗೇರ, ಗುರುರಾಜ, ಬೀಮರಾಯ ಗುತ್ತೇದಾರ ಸೇರಿದಂತೆ ಹಲವಾರು ಜನರು ಭಾಗವಹಿಸಿದ್ದರು.
————————–