ಖಾರವಾದ ಚಿಪ್ಸ್ ತಿಂದ 14ರ ಬಾಲಕನಿಗೆ ಹೃದಯ ಸ್ತಂಭನ
ನ್ಯೂಯಾರ್ಕ್: ಅತ್ಯಂತ ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಸಾಮಾಜಿಕ ಮಾಧ್ಯಮ ಚಾಲೆಂಜ್ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಹೌದು. . ಇತ್ತೀಚೆಗೆ ಸೋಶಿಯಲ್ ಮೀಡಿಯಾ ರೀಲ್ಸ್‌ಗಳಲ್ಲಿ ಕಾಣಿಸಿಕೊಳ್ಳುವ ಹುಚ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಮೂಲಕ ತಾವು ಬೇಗ ಫೇಮಸ್ ಆಗಬೇಕೆಂಬ ಉದ್ದೇಶ ಇರುತ್ತದೆ. ಆದ್ದರಿಂದ ಏನೇನೂ ಮಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದಕೊಳ್ಳುತ್ತಾರೆ. ಅದರಂತೆ ಮ್ಯಾಸಚೂಸೆಟ್ಸ್‌ನ 14 ವರ್ಷದ ಹ್ಯಾರಿಸ್ ವೊಲೊಬಾಹ್ ʼಒನ್ ಚಿಪ್ ಚಾಲೆಂಜ್ʼ ನಲ್ಲಿ ಭಾಗವಹಿಸಿದ ನಂತರ ಸಾವನ್ನಪ್ಪಿದ್ದಾರೆ. ಕ್ಯಾರೊಲಿನಾ ರೀಪರ್ ಮತ್ತು ನಾಗಾ ವೈಪರ್ ಪೆಪ್ಪರ್ ಗಳೊಂದಿಗೆ ಉತ್ಪಾದಿಸಿದ ಚಿಪ್ ಇದಾಗಿತ್ತು.
ಕ್ಯಾಪ್ಸೈಸಿನ್ ಎಂಬ ಮೆಣಸಿನಕಾಯಿಯ ಸಾರವನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದ ನಂತರ ಹ್ಯಾರಿಸ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಮುಖ್ಯ ವೈದ್ಯಕೀಯ ಪರೀಕ್ಷಕರು ನಿರ್ಧರಿಸಿದ್ದಾರೆ ಎಂದು ಶವಪರೀಕ್ಷೆ ವರದಿ ತಿಳಿಸಿದೆ. ಕ್ಯಾಲಿಫೋರ್ನಿಯಾದಲ್ಲಿ, ಈ ಚಾಲೆಂಜ್ ನಲ್ಲಿ ಭಾಗವಹಿಸಿದ ನಂತರ ಮೂವರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅದೇ ಕಾರಣಕ್ಕಾಗಿ ಮಿನ್ನೇಸೋಟದಲ್ಲಿ ಏಳು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.