Homeಅಂಕಣಜನಮನವಿನಯ ವಿಶೇಷ
ವಿಶ್ವ ಜೇನುನೊಣ ದಿನದ ಇತಿಹಾಸ
ಜೇನುಸಾಕಣೆಯ ಪ್ರವರ್ತಕ ಆಂಟನ್ ಜಾನ್ಸಾ 1734 ರಲ್ಲಿ ಸ್ಲೊವೇನಿಯಾದಲ್ಲಿ ಜನಿಸಿದರು. ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷವು ವಿಶ್ವ ಜೇನುನೊಣ ದಿನವೆಂದು ಆಚರಿಸಲಾಗುತ್ತದೆ.
ಆದರೆ ವಿಶ್ವ ಜೇನುನೊಣ ದಿನದ ಉದ್ದೇಶ, ಪರಿಸರ ವ್ಯವಸ್ಥೆಯಲ್ಲಿ ಜೇನುನೊಣಗಳ ಪಾತ್ರವನ್ನು ಅಂಗೀಕರಿಸುವುದು. ಹೀಗಾಗಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು 2017 ರ ಡಿಸೆಂಬರ್ನಲ್ಲಿ ವಿಶ್ವ ಜೇನುನೊಣ ದಿನಾಚರಣೆಯ ಪ್ರಸ್ತಾಪವನ್ನು ಅಂಗೀಕರಿಸಿದವು. 2018 ರಮೇ 20 ರಂದು ವಿಶ್ವ ಜೇನುನೊಣ ದಿನವನ್ನು ಮೊದಲ ಬಾರಿಗೆ ಆಚರಿಸಲಾಯಿತು.