Homeಪ್ರಮುಖ ಸುದ್ದಿ
ಬೆಂಗಳೂರಿನ 3 ‘ಫೈವ್ ಸ್ಟಾರ್’ ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ ಇ-ಮೇಲ್, ಸ್ಥಳಕ್ಕೆ ಪೊಲೀಸರ ದೌಡು!
ಬೆಂಗಳೂರು : ಬೆಂಗಳೂರಿನ ಮೂರು ಫೈವ್ ಸ್ಟಾರ್ ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಬಂದಿದೆ ಎನ್ನಲಾಗಿದೆ. ಹಲವು ದಿನಗಳಿಂದ ಈ ರೀತಿ ಬೆದರಿಕೆ ಮೇಲ್ಗಳು ಬರುತ್ತ ಇದ್ದರ ಕೂಡ ಪೊಲೀಸರು ಆರೋಪಿಗಳ ಹೆಡೆ ಮುರಿಕಟ್ಟುವುದಕ್ಕೆ ಮುಂದಾಗಿಲ್ಲ ಅಂಥ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಟಿತ 3 ಫೈವ್ ಸ್ಟಾರ್ ಹೋಟೆಲ್ ಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಬಂದಿದ್ದು ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಪೊಲೀಸರು ಮತ್ತು ಬಾಂಬ್ ಸ್ಕಾಡ್ ಸ್ಥಳಕ್ಕೆ ಆಗಮಿಸಿದ್ದು. ನಿನ್ನೆ ರಾತ್ರಿ ಎರಡು ಗಂಟೆ ಸುಮಾರಿಗೆ ಮೇಲ್ ಬಂದಿದೆ ಎನ್ನಲಾಗಿದ್ದು, ಇಂದು ಮೇಲ್ ಓಪನ್ ಮಾಡಿದ ವೇಳೆಯಲ್ಲಿ ಇದು ಗಮನಕ್ಕೆ ಬಂದಿದೆ ಎನ್ನಲಾಗಿದೆ. ಕೂಡಲೇ ಹೋಟೆಲ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ದೌಡಾಯಿಸಿ ಪರಿಶೀಲನೆ ನಡೆಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.