ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಪೋಸ್ಟ್ : ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದೇನು?
ಶಿವಮೊಗ್ಗ: ಆಡಳಿತದಲ್ಲಿ ಇರುವವರು ಬಿಗಿಯಾಗಿ ಇದ್ದಾಗ ಮಾತ್ರ ಶಾಂತ ಪರಿಸ್ಥಿತಿ ಲಭಿಸುತ್ತದೆ. ಈ ಸರಕಾರದಡಿ ವಿಧಾನಸೌಧದ ಒಳಗೇ ದೇಶವಿರೋಧಿ, ಪಾಕಿಸ್ತಾನದ ಪರ ಘೋಷಣೆ ಕೂಗಲಾಗಿತ್ತು. ಮೊನ್ನೆ ಕೊಪ್ಪದಲ್ಲೂ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಸರ್ಕಾರದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರ್ಕಾರದವರು ಯಾರನ್ನ ರಕ್ಷಣೆ ಮಾಡಲು ಹೊರಟಿದ್ದಾರೆ. ಹುಬ್ಬಳ್ಳಿ ನೇಹಾರನ್ನ ಚೂರಿ ಹಾಕಿ ಕೊಂದಾಗ ಗೃಹ ಸಚಿವರು ಲವ್ ಪ್ರಕರಣ ಸಂಬಂಧಿಸಿದ್ದು ಅಂತಾರೆ. ಲೋಕಲ್ ಪೊಲೀಸರಿಗೆ ಮಾಮೂಲಿ ಕೊಟ್ಟು ಮಾದಕ ವಸ್ತು ಮಾರಾಟ ಆಗುತ್ತಿದೆ. ಎಲ್ಲೆಂದರಲ್ಲಿ ಮಾದಕ ವಸ್ತು ಸಿಗ್ತಿದೆ. ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ವ ಜನಾಂಗ ತೋಟವಾಗಿ ಉಳಿಯಲಿಲ್ಲ. ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಯಾಗಿದೆ, ನಕ್ಸಲೀಯ ಚಟುವಟಿಕೆ ರಾಜ್ಯದಲ್ಲಿ ತಲೆ ಎತ್ತುತ್ತಿವೆ. ಕ್ರೈಂ ಗೂ ಕಾಂಗ್ರೆಸ್ ಗೂ ಸಂಬಂಧ ಇದೆ, ಕ್ರೈಂ ರೇಟ್ ಜಾಸ್ತಿಯಾಗುತ್ತಿದೆ. ರಾಜ್ಯದ ಜನರ ನೆಮ್ಮದಿ ಹಾಳಾಗುತ್ತಿದೆ. ರಾಜ್ಯದಲ್ಲಿ ಪೊಲೀಸರಿಗೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸರ ಬಗ್ಗೆ ಅಪರಾಧಿಗಳಿಗೆ ಗೌರವ ಇಲ್ಲ ಅಥವಾ ಭಯ ಇಲ್ಲ. ಪೊಲೀಸ್ ವ್ಯವಸ್ಥೆಯನ್ನೇ ತಮ್ಮ ರಾಜಕೀಯಕ್ಕಾಗಿ ಬಳಸಿಕೊಳ್ಳುವ ಪ್ರಯತ್ನ ಈ ಸರಕಾರದ ಕಡೆಯಿಂದ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಟೀಕಿಸಿದರು.
ನಿನ್ನೆ ಚನ್ನಗಿರಿಯಲ್ಲಿ ನಡೆದ ಪ್ರಕರಣದಡಿ ಅಪರಾಧಿಯನ್ನು ಕರೆದುಕೊಂಡು ಬಂದಿದ್ದರು. ಲಾಕಪ್ ಡೆತ್ ಎಂದು ಹೇಳಿದ್ದಾರೆ ಎಂದು ತಿಳಿಸಿದ ಅವರು, ರಾಜ್ಯದಲ್ಲಿ ಅಪರಾಧದ ಸಂಖ್ಯೆ ಹೆಚ್ಚಳದಿಂದ ಜನರ ನೆಮ್ಮದಿ ಹಾಳಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಪರಾಧ ಪ್ರಕರಣಗಳ ಹೆಚ್ಚಳ ಕುರಿತ ಅಂಕಿ ಅಂಶಗಳನ್ನು ಅವರು ಮುಂದಿಟ್ಟರು.
ಬಿಜೆಪಿ ಕಾರ್ಯಕರ್ತರ ಮೇಲೆ ರೌಡಿ ಶೀಟರ್ ಹಾಕುವಂತಹ ವ್ಯವಸ್ಥೆ ನಿರ್ಮಾಣ ಆಗುತ್ತಿದೆ. ಪೊಲೀಸ್ ವ್ಯವಸ್ಥೆ ಬದಲಾಗಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಇದನ್ನ ಕೂಡಲೇ ಸರ್ಕಾರದ ಸರಿ ಮಾಡಬೇಕು ರಾಜ್ಯದ ಜನರ ನೆಮ್ಮದಿ ಮೇಲೆ ಬೀರುತ್ತದೆ, ಬಿಜೆಪಿ ಇದನ್ನ ತೀವ್ರವಾಗಿ ಖಂಡಿಸುತ್ತದೆ. ನಾವು ಜನ ಬಳಿ ಹೋಗುತ್ತೇವೆ. ಇದನ್ನ ಕೂಡಲೇ ಸರ್ಕಾರ ಸರಿಪಡಿಸಿಕೊಳ್ಳಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಜ್ವಲ್ ರೇವಣ್ಣ ಪ್ರಕರಣ ಕುರಿತು ಮಾತನಾಡಿದ ಅವರು, ಈ ಪ್ರಕರಣವನ್ನ ನಾವು ಉಗ್ರವಾಗಿ ಖಂಡಿಸುತ್ತೇವೆ. ಘಟನೆ ನಡೆದಿದ್ದು ತಪ್ಪು, ಕೂಡಲೇ ಅವರನ್ನ ಎಳೆದು ತರಬೇಕು, ಪ್ರಜ್ವಲ್ ರೇವಣ್ಣ ದೇಶ ಬಿಟ್ಟಿದ್ದಾರೆ ಅನ್ನೋದು ಕಾರಣ ಏನು? ಪಾಸ್ ಪೋಟ್ ರದ್ಧತಿ ಎರಡು ದಿನ ಮಾಡ್ತಾರೆ, ಪ್ರಜ್ವಲ್ ರೇವಣ್ಣ ಪ್ರಕರಣ ಖಂಡಿಸಿದ್ದೇವೆ. ನಮ್ಮ ಕೇಂದ್ರದ ನಾಯಕರು ಇದನ್ನ ಖಂಡಿಸಿದ್ದಾರೆ. ಈ ಪ್ರಕರಣವನ್ನ ವಿರೋಧ ಮಾಡಿದ್ದೇವೆ ಕಾನೂನು ಸುವ್ಯವಸ್ಥೆ ಇರಬೇಕಾಗುತ್ತದೆ, ಕಾಂಗ್ರೆಸ್ ನವರು ಕೂಡ ಕಾಳಜಿ ತೋರಿಲ್ಲ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಬಳಸಿಕೊಂಡಿದೆ ಎಂದು ಹೇಳಿದರು.
ಚನ್ನಗಿರಿಯಲ್ಲಿ ನಡೆದ ಗಲಾಟೆ ಪ್ರಕರಣದ ಕುರಿತು ಮಾತನಾಡಿ, 2000 ಸಾವಿರ ಜನ ಪೊಲೀಸರ ವಾಹನ ಜಖಂ ಗೊಳಿಸಿರೋದು ದಿಗ್ರಮ್ಮೆ ಉಂಟು ಮಾಡಿದೆ. ಇವರಿಗೆ ಪೊಲೀಸರ ಮೇಲೆ ಭಯ ಇಲ್ಲದಂತಾಗಿದೆ, ಸರ್ಕಾರದ ಮೇಲೆ ಈತರ ಮಾಡುವವರಿಗೆ ಭಯ ಇಲ್ಲ. ಈ ಹಿಂದೆ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಸೇರಿದಂತೆ ಇತರೆ ಕೇಸ್ ನಲ್ಲಿ ಅಮಾಯಕ ಎಂದು ಕಾಂಗ್ರೆಸ್ ನಾಯಕರು ಹೇಳಿದ್ರು, ಆಡಳಿತದಲ್ಲಿರುವವರು ಬಿಗಿಯಾಗಬೇಕು ಎಂದು ಹೇಳಿದರು.