Homeಪ್ರಮುಖ ಸುದ್ದಿ
ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ: ಜೂನ್ 18 ರಂದು ನೇರನೇಮಕಾತಿ
ಅಂಚೆ ಜೀವವಿಮೆ ಹಾಗೂ ಗ್ರಾಮೀಣ ಜೀವವಿಮೆಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳ ನಿಯುಕ್ತಿಗಾಗಿ ಅಂಚೆ ಇಲಾಖೆ ಜೂನ್ 18ರಂದು ಬೆಳಿಗ್ಗೆ 11ಕ್ಕೆ ಅಭ್ಯರ್ಥಿಗಳ ನೇರ ಸಂದರ್ಶನ ಏರ್ಪಡಿಸಿದೆ.
ಅಭ್ಯರ್ಥಿಗಳು ತಮ್ಮ ಇತ್ತೀಚಿನ ಭಾವಚಿತ್ರಗಳೊಂದಿಗೆ ಸ್ವವಿವರ, ಶೈಕ್ಷಣಿಕ ಪ್ರಮಾಣಪತ್ರದ ಛಾಯಾ ಪ್ರತಿಗಳೊಂದಿಗೆ ಮಹಾಲಕ್ಷ್ಮಿಪುರ ಪೊಲೀಸ್ ಠಾಣೆ ಬಳಿಯ ಚಿಂಗಳೂರು ಪಶ್ಚಿಮ ಅಂಚೆ ವಿಭಾಗ, ವರಿಷ್ಠ ಅಂಚೆ ಅಧೀಕ್ಷಕರ ಕಾರ್ಯಾಲಯ, ಬೆಂಗಳೂರು ಇಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ವಿವರಗಳಿಗೆ 9886854974 ಸಂಖ್ಯೆಗೆ ಸಂಪರ್ಕಿಸುವುದು.