ಪ್ರಮುಖ ಸುದ್ದಿ
ಅಮೆಜಾನ್ ನಿಂದ ಎಕ್ಸ್ ಬಾಕ್ಸ್ ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ಭುಸ್ಭುಸ್ ಹಾವು
ಬೆಂಗಳೂರು: ಸರ್ಜಾಪುರದ ನಿವಾಸಿಯೊಬ್ಬರು ಕಳೆದ 2 ದಿನಗಳ ಹಿಂದೆ x ಗೇಮಿಂಗ್ ಕಂಟ್ರೋಲರ್ ಅನ್ನು ಅಮೆಜಾನ್ನಲ್ಲಿ ಆರ್ಡರ್ ಮಾಡಿದ್ರು. ಡೆಲಿವರಿ ಬಾಯ್ ಕೈ ಅಲ್ಲೇ ಬಾಕ್ಸ್ ಕೊಟ್ಟು ಹೋಗಿರುತ್ತಾನಂತೆ.
ಬಾಕ್ಸ್ ಓಪನ್ ಮಾಡ್ತಾಯಿದ್ದ ಹಾಗೇ ಹಾವಿನ ಮರಿ ಬಾಕ್ಸ್ ಒಳಗಡೆ ಇರುವುದು ಬೆಳಕಿಗೆ ಬಂದಿದೆ. ಹಾವು ಕಂಡ ಮಹಿಳೆ ಬೆಚ್ಚಿಬಿದ್ದಿದ್ದಾರೆ. ಇದು ವಿಷಕಾರಿ ಕೋಬ್ರಾ ಮರಿ ಅಂತ ಹೇಳಲಾಗುತ್ತಿದೆ. ಘಟನೆ ಬಗ್ಗೆ ಅಮೇಜಾನ್ಗೂ ಮಹಿಳೆ ದೂರು ನೀಡಿದ್ದಾರೆ. ಹಣ ರಿ ಫಂಡ್ ಆಗಿದೆ. ಆದ್ರೆ ಜೀವಕ್ಕೆ ಏನಾದ್ರೂ ಹೆಚ್ಚು ಕಮ್ಮಿ ಆಗಿದ್ರೆ ಯಾರು ಹೊಣೆ ಅನ್ನೋ ಪ್ರಶ್ನೆ ಮೂಡುತ್ತೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿದೆ.