HSRP ನಂಬರ್ ಪ್ಲೇಟ್ ಹಾಕಿಸಿದ್ರು ಬೀಳುತ್ತೆ ದಂಡ, ಯಾಕೆ ಗೊತ್ತಾ?

ವಾಹನ ಸವಾರರಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ಸೆ.15 ರವರೆಗೆ ವಿಸ್ತರಣೆ ಮಾಡಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಈ ಹಿಂದೆ ಎಲ್ಲಾ ಹಳೆಯ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಕೆಗೆ ಜೂನ್ 12 ರ ವರೆಗೆ ಅವಕಾಶ ನೀಡಲಾಗಿತ್ತು. ನಂತರ ಜುಲೈ 4 ರ ವರೆಗೆ ವಿಸ್ತರಣೆ ಮಾಡಲಾಗಿತ್ತು. ಇದೀಗ ಸೆ. 15 ರವರೆಗೆ ವಿಸ್ತರಣೆ ಮಾಡಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇರುವವರಿಗೆ ಸಿಹಿಸುದ್ದಿ ನೀಡಿದೆ.
ಕರ್ನಾಟಕ ರಾಜ್ಯದಲ್ಲಿ 1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿಸಲ್ಪಟ್ಟ ಹಳೆಯ ಎಲ್ಲಾ (ಹಳೆಯ / ಅಸ್ತಿತ್ವದಲ್ಲಿರುವ ವಾಹನಗಳು) (ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರಾಕ್ಟರ್ ಇತ್ಯಾದಿ) ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್.ಎಸ್.ಆರ್.ಪಿ) ಅಳವಡಿಸುವುದು ಕಡ್ಡಾಯ.
ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಕೊಂಡ್ರು ಕೂಡ ಬೀಳುತ್ತೆ ಫೈನ್:
ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡಿದ್ದರೂ ಕೂಡ ನಿಮಗೆ ದಂಡ ಬೀಳತ್ತೆ. ಹೌದು, ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ ಆದ ನಂತರ ನಂಬರ್ ಪ್ಲೇಟ್ ಮೇಲೆ ಯಾವುದೇ ರೀತಿಯ ಸ್ಟಿಕರ್ ಅನ್ನು ಹಾಕಿಸುವಂತಿಲ್ಲ. ಅಂದರೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಮೇಲೆ ಯಾವುದೇ ರೀತಿಯ ಬರಹಗಳಾಗಲಿ ಅಥವಾ ಸಿನಿಮಾ ನಟರ ಫೋಟೋ ಸ್ಟಿಕರ್ ಗಳು ನಂಬರ್ ಪ್ಲೇಟ್ ಮೇಲೆ ಅಳವಡಿಸುವಂತಿಲ್ಲ. ಒಂದು ವೇಳೆ ಹೀಗೆ ಮಾಡಿದ್ದೇ ಆದಲ್ಲಿ ಅಂತಹ ವಾಹನ ಸವಾರರಿಗೂ ಕೂಡ ದಂಡದ ಬಿಸಿ ಮುಟ್ಟಲ್ಲಿದೆ. ಹೀಗಾಗಿ ವಾಹನ ಸವಾರರರು ನಂಬತ್ ಪ್ಲೇಟ್ ಮೇಲೆ ಯಾವುದೇ ರೀತಿಯ ಬರಹ, ಸ್ಟಿಕರ್ ಅಂಟಿಸಬೇಡಿ.
ಇನ್ನು ಅಳವಡಿಕೆ ಮಾಡದೇ ಇರುವವರಿಗೂ ಗಡುವು ಮುಗಿದ ನಂತರ ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇದ್ದಲ್ಲಿ ಅಂತಹ ವಾಹನ ಸವಾರರು ಈಗಲೇ ಮಾಡಿಸಿಕೊಳ್ಳಿ