ಪ್ರಮುಖ ಸುದ್ದಿ

ಜಿಯೋ ಬೆನ್ನಲ್ಲೇ ಏರ್ಟೆಲ್​ನಿಂದಲೂ ಬೆಲೆ ಹೆಚ್ಚಳ..!

ರಿಲಾಯನ್ಸ್ ಜಿಯೋ ಮೊಬೈಲ್ ಧ್ವನಿಕರೆ ಮತ್ತು ಡಾಟಾ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ಏರ್ಟೆಲ್ ಕೂಡ ಬೆಲೆ ಏರಿಕೆ ಮಾಡಿದೆ. ಏರ್ಟೆಲ್ ಸಂಸ್ಥೆ ವಿವಿಧ ಪ್ಲಾನ್​ಗಳಿಗೆ ಶೇ. 11ರಿಂದ ಶೇ. 21ರವರೆಗೂ ದರ ಹೆಚ್ಚಳ ಮಾಡಿದೆ. ರಿಲಾಯನ್ಸ್ ಜಿಯೋ ಶೇ. 12ರಿಂದ ಶೇ. 27ರವರೆಗೂ ಏರಿಕೆ ಮಾಡಿ ದರ ಪರಿಷ್ಕರಣೆ ಮಾಡಿದೆ. ಜಿಯೋ ಮತ್ತು ಏರ್ಟೆಲ್ ಹೊಸ ದರಗಳು ಜುಲೈ 3ರಂದು ಜಾರಿಗೆ ಬರಲಿದೆ.

ನವದೆಹಲಿ: ಹತ್ತು ವರ್ಷಗಳ ಹಿಂದೆ ರಿಲಾಯನ್ಸ್ ಜಿಯೋ ಅಗ್ಗದ ದರಕ್ಕೆ ಮೊಬೈಲ್ ಮತ್ತು ಡಾಟಾ ನೀಡಿ ಬೆಲೆ ಸಮರಕ್ಕೆ ಅಡಿ ಇಟ್ಟಿತ್ತು. ಇದೀಗ ಬೆಲೆ ಏರಿಕೆಯಲ್ಲೂ ಮುಂದಾಳತ್ವ ವಹಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಜಿಯೋ ನಿನ್ನೆ ವಿವಿಧ ಪ್ಲಾನ್​ಗಳಿಗೆ ಶೇ. 27ರವರೆಗೂ ಬೆಲೆ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಏರ್ಟೆಲ್ ಕೂಡ ಶೇ. 21ರವರೆಗೂ ಬೆಲೆ ಏರಿಸಲು ನಿರ್ಧರಿಸಿದೆ. ಎರಡೂ ಟೆಲಿಕಾಂ ಆಪರೇಟರ್​ಗಳ ಹೊಸ ದರಗಳು ಜುಲೈ 3ರಿಂದ ಜಾರಿಗೆ ಬರಲಿವೆ.

Related Articles

Leave a Reply

Your email address will not be published. Required fields are marked *

Back to top button