Homeಜನಮನಪ್ರಮುಖ ಸುದ್ದಿ
ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ಬಳಿ ಸಿಕ್ತು 15 ಸಿಮ್ ಕಾರ್ಡ್..!

ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯರಿಗೆ ಕರೆ ಮಾಡಲು ಪ್ರಜ್ವಲ್ ಹತ್ತಿರ ಬರೋಬ್ಬರಿ 15 ಸಿಮ್ ಕಾರ್ಡ್ ಇವೆ ಎನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಹೌದು ಪ್ರಜ್ವಲ್ ರೇವಣ್ಣನ ಬಳಿ ಒಂದಲ್ಲ, ಎರಡಲ್ಲ 15 ಸಿಮ್ಗಳಿದ್ದವು ಎಂದು ತಿಳಿದು ಬಂದಿದೆ. ಈ ಸಿಮ್ ಕಾರ್ಡ್ ಮೂಲಕ ಮಹಿಳೆಯರಿಗೆ ಬ್ಲಾಕ್ಮೇಲ್ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಮಹಿಳೆಯರು ಒಂದು ನಂಬರ್ ಬ್ಲಾಕ್ ಮಾಡಿದ್ರೆ ಮತ್ತೊಂದು ನಂಬರ್ನಿಂದ ಕಾಲ್ ಮಾಡಿ, ನಗ್ನ, ಅರೆನಗ್ನ ಸ್ಕ್ರೀನ್ ಶಾಟ್ ಕಳಿಸಿ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಸಹಕರಿಸದಿದ್ದರೆ ಫೋಟೋ, ವಿಡಿಯೋ ವೈರಲ್ ಮಾಡೋ ಬೆದರಿಕೆ ಹಾಕುತ್ತಿದ್ದನಂತೆ. ಪ್ರಜ್ವಲ್ಗೆ ಹೆದರಿ ಸಂತ್ರಸ್ತೆಯರು ಬೆತ್ತಲಾಗಿದ್ದರಂತೆ. ಕೆಲಸ ಕೇಳಿಕೊಂಡು ಬಂದವರು, ಮಕ್ಕಳಿಗೆ ಸೀಟ್ಗಾಗಿ ಬಂದವರು, ಕೆಲ ಪರಿಚಿತರ ಪತ್ನಿಯರೇ ಪ್ರಜ್ವಲ್ ರೇವಣ್ಣ ಟಾರ್ಗೆಟ್.