Homeಅಂಕಣಪ್ರಮುಖ ಸುದ್ದಿ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಿದ ಡೆಂಗ್ಯೂ ಅಬ್ಬರ; BBMP ಹೈಅಲರ್ಟ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನಕಳೆಯುತ್ತಿದ್ದಂತೆ ಡೆಂಗ್ಯೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕು ನಿಯಂತ್ರಿಸಲು ಬಿಬಿಎಂಪಿ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು, ಸೋಂಕು ನಿವಾರಣೆ ಕುರಿತಂತೆ ಆರೋಗ್ಯ ಇಲಾಖೆಯೊಂದಿಗೆ ನಾವು ಸತತ ಸಂಪರ್ಕದಲ್ಲಿದ್ದೇವೆ ಅವರ ನೆರವಿನೊಂದಿಗೆ ಸೋಂಕು ನಿವಾರಣೆ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಪ್ರತಿ ವರ್ಷ ಜೂನ್ ನಿಂದ ಆಗಸ್ಟ್ ಸೆಪ್ಟೆಂಬರ್ ವರೆಗೆ ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತೆ ಅದು ಪೀಕ್ ಆಗೋದು ಸೆಪ್ಟೆಂಬರ್ ನಲ್ಲಿ. ಆದರೆ, ಈ ಬಾರಿ ಜೂನ್ ನಲ್ಲೇ ಪೀಕ್ ಗೆ ಹೋಗಿದೆ ಇದರಿಂದ ಸಮಸ್ಯೆ ಉಲ್ಬಣಗೊಂಡಿದೆ ಎಂದು ಮಾಹಿತಿ ನೀಡಿದರು.

ಕಳೆದ ವರ್ಷ ಜೂನ್ ನಲ್ಲಿ ಕೇವಲ 750 ಪ್ರಕರಣಗಳು ದಾಖಲಾಗಿದ್ದವು. ಆದರೆ, ಈ ಬಾರಿ ಅದರ ಸಂಖ್ಯೆ ಎರಡು ಸಾವಿರ ದಾಟಿದೆ. ಹಾಗಾಗಿ ನಾವು ತಂಡಗಳನ್ನು ರಚನೆ ಮಾಡಿ ಜನರನ್ನು ಜಾಗತಿಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಕ್ಯಾಂಪೇನಿಂಗ್ ನಡೆಸಲಾಗುತ್ತಿದೆ, ಮನೆ ಮನೆಗೆ ತೆರಳಿ ಕರಪತ್ರ ಹಂಚಿ ತಿಳುವಳಿಕೆ ನೀಡುತ್ತಿದ್ದೇವೆ.ಬಸ್ ಸ್ಟ್ಯಾಂಡ್ ಜಾಹೀರಾತುಗಳನ್ನು ಹಾಕಲಿದ್ದೇವೆ ಎಂದು ತಿಳಿಸಿದರು. ಫ್ರೆಶ್ ವಾಟರ್ ನಲ್ಲಿ ಉತ್ಪತಿಯಾಗುವ ಸೊಳ್ಳೆಗಳಿಂದ ಡೆಂಗ್ಯೂ ಸೋಂಕು ಬರುತ್ತೆ ಬಿಬಿಎಂಪಿ ಯಲ್ಲಿ ಆರು ಸಾವಿರ ಟೆಸ್ಟಿಂಗ್ ಕಿಟ್ ಇದೆ ಆದರೂ ಶೇ.95ರಷ್ಟು ಕೇಸ್ ಗಳು ಖಾಸಗಿಯಲ್ಲಿ ರಿಪೋರ್ಟಿಂಗ್ ಆಗುತ್ತಾ ಇದೆ ಎಂದು ಹೇಳಿದರು.

ಬಿಬಿಎಂಪಿ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳು ಅತೀ ಹೆಚ್ಚು ಜ್ವರ ಇರುವ ರೋಗಿಗಳಿಗೆ ಡೆಂಗ್ಯೂ ಟೆಸ್ಟ್ ಮಾಡಲು ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.ಸೋಂಕು ತಗುಲಿದ ವ್ಯಕ್ತಿಯಲ್ಲಿ ಬಿಳಿ ರಕ್ತಕಣಗಳು 20 ಸಾವಿರಕ್ಕಿಂತ ಕಡಿಮೆ ಆದರೆ, ಅಂತಹ ವ್ಯಕ್ತಿಗೆ ಬ್ಲಡ್ ಡೊನೆಟ್ ಅವಶ್ಯಕತೆ ಇದೆ ಉಳಿದಂತೆ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತೆ ಎಂದು ಮಾಹಿತಿ ನೀಡಿದರು.

ಮುಖ್ಯ ಆರೋಗ್ಯಾಧಿಕಾರಿ ಸಿರಾಜುದ್ದೀನ್ ಮದನಿ ಮಾತನಾಡಿ, ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದರೂ, ಇದು ಆತಂಕಕಾರಿಯಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ನಗರದಲ್ಲಿ ಐದು ಸಾವುಗಳು ವರದಿಯಾಗಿದ್ದವು. ಸೋಂಕು ಗಮನದಲ್ಲಿಟ್ಟುಕೊಂಡು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಆರೋಗ್ಯ ಕಾರ್ಯಕರ್ತರು ಸಮೀಕ್ಷೆಗಳನ್ನು ನಡೆಸುತ್ತಿದ್ದಾರೆ. ಫಾಗಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button