ಪೋಷಕರೇ ಎಚ್ಚರ: ಮಕ್ಕಳಲ್ಲಿ ಕಾಡ್ತಿದೆ ಡೆಂಗ್ಯೂ ಜ್ವರದ ಜೊತೆ ಜಾಂಡಿಸ್ ,ಕಾಮಾಲೆ!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಡೆಂಗ್ಯೂ (Dengue) ಕಾಟ ಶುರುವಾಗಿದೆ. ಡೆಂಗ್ಯೂ ಜ್ವರಕ್ಕೆ ಮಕ್ಕಳು ಪರದಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ಡೆಂಗ್ಯೂ ಜ್ವರದ ಜೊತೆಗೆ ಮಕ್ಕಳಲ್ಲಿ ಜಾಂಡಿಸ್ (Jaundice), ಕಾಮಾಲೆ ಕಾಟ ಶುರುವಾಗಿದೆ. ಇದಕ್ಕೆಲ್ಲ ಪ್ರಮುಖ ಕಾರಣ ಅಂದ್ರೆ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮವಾದ ನೀರು ಹಾಗೂ ಆಹಾರ ಸಿಗದೇ ಇರುವುದು ಇದಕ್ಕೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.
ಶಾಲಾ ಮಕ್ಕಳಲ್ಲಿ ಡೆಂಗ್ಯೂ ಜ್ವರದ ಜೊತೆ ಜಾಂಡಿಸ್ ಹಾವಳಿ ಶುರುವಾಗಿದ್ದು ಪುಟಾಣಿ ಮಕ್ಕಳ ಜೀವ ಹಿಂಡುತ್ತಿದೆ. ಜಾಂಡಿಸ್ ಹಾಗೂ ಟೈಫಾಯ್ಡ ಜ್ವರ, ಡೆಂಗ್ಯೂ ಮಕ್ಕಳಲ್ಲಿ ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಶಾಲಾ ಮಕ್ಕಳಲ್ಲಿ ಹೆಚ್ಚಾಗಿ ಜಾಂಡಿಸ್ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಎರಡು ವಿಧದ ಕಾಮಾಲೆ ಕಂಡುಬರುತ್ತದೆ. ಇದರಲ್ಲಿ ಸೈಕಲಾಜಿಕಲ್ ಜಾಂಡಿಸ್ ಮತ್ತು ಪೆಥಲಾಜಿಕಲ್ ಜಾಂಡಿಸ್. ಯಕೃತ್ ನಲ್ಲಿ ಯಾವುದಾದರೂ ಸೋಂಕು ಅಥವಾ ಯಾವುದೇ ಚಯಾಪಚಯ ಪರಿಸ್ಥಿತಿಯಲ್ಲಿ ತೊಂದರೆ ನೀಡುವುದರಿಂದ ಎದುರಾಗುತ್ತದೆ. ಸದ್ಯ ವಾತಾವರಣ ಹಿನ್ನಲೆ ಮಕ್ಕಳಲ್ಲಿ ಜ್ವರದ ಜೊತೆ ಜಾಂಡಿಸ್ ಕಾಣಿಸಿಕೊಳ್ಳುತ್ತಿರುವುದರಿಂದ ಪೋಷಕರಿಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.