Homeಅಂಕಣಜನಮನಮಹಿಳಾ ವಾಣಿ

Health Tips: ಅಜೀರ್ಣತೆಯ ಸಮಸ್ಯೆ ಇರುವವರು ಇದರ ಎಲೆಯನ್ನು ಕುದಿಸಿ ಕುಡಿಯಿರಿ!

ಅನೇಕ ಗಿಡಗಳು ಸಾವಿರಾರು ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇವುಗಳ ಬಗ್ಗೆ ನಾವು ಸರಿಯಾಗಿ ತಿಳಿದುಕೊಂಡು ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬೇಕಾಗುತ್ತದೆ. ಇಂತಹ ಗಿಡಗಳಲ್ಲಿ ತುಂಬೆ ಗಿಡವೂ ಒಂದು. ಇದು ದಾರಿ ಬದಿಗಳಲ್ಲಿ ಇದ್ದರೂ ಕೂಡ ಇದರ ಔಷಧೀಯ ಗುಣಗಳ ಬಗ್ಗೆ ತಿಳಿದರೆ ಆಚ್ಚರಿಯಾಗುವುದರಲ್ಲಿ ಸಂಶಯವಿಲ್ಲ. ತುಂಬೆ ಗಿಡದಲ್ಲಿ ಹಲವು ವಿಧಗಳಿದ್ದು ಇದರಲ್ಲಿ ಬಿಳಿ ತುಂಬೆ ಹೂವುಗಳನ್ನು ಬಿಡುವ ಗಿಡ ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಅಜೀರ್ಣತೆಯ ಸಮಸ್ಯೆ ಇರುವವರು ತುಂಬೆ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ಬಳಿಕ ಅದನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ ನಂತರ ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ಜೀರ್ಣಶಕ್ತಿ ಉತ್ತಮವಾಗುತ್ತದೆ. ಪಚನಕ್ರಿಯೆಯನ್ನು ಸುಧಾರಿಸಲು ಇದು ಸುಲಭದ ಮಾರ್ಗವಾಗಿದೆ. ತುಂಬೆ ಗಿಡದ ಬೇರು, ಕಾಂಡ ಮತ್ತು ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಬಳಿಕ ಅದರ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ತಲೆನೋವು ಬೇಗ ವಾಸಿಯಾಗುತ್ತದೆ. ಜೊತೆಗೆ ಇದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ. ಹಿಂದಿನಿಂದಲೂ ಹಾವು ಕಚ್ಚಿದಾಗ ತುಂಬೆ ಗಿಡದ ಎಲೆಯ ರಸವನ್ನು ಆ ಜಾಗಕ್ಕೆ ಹಚ್ಚುವ ಪದ್ದತಿ ಇದೆ. ಹೀಗೆ ಮಾಡುವುದರಿಂದ ಹಾವಿನ ವಿಷ ರಕ್ತದಲ್ಲಿ ಸೇರಿಕೊಳ್ಳದೆ ಸಾವು ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತೆ ಎಂದು ಹೇಳಲಾಗುತ್ತದೆ. ಅಜೀರ್ಣತೆಯ ಸಮಸ್ಯೆ ಇರುವವರು ತುಂಬೆ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ಬಳಿಕ ಅದನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ ನಂತರ ಚಿಟಿಕೆ ಉಪ್ಪು ಸೇರಿಸಿ ಕುಡಿದರೆ ಜೀರ್ಣಶಕ್ತಿ ಉತ್ತಮವಾಗುತ್ತದೆ. ಪಚನಕ್ರಿಯೆಯನ್ನು ಸುಧಾರಿಸಲು ಇದು ಸುಲಭದ ಮಾರ್ಗವಾಗಿದೆ. ತುಂಬೆ ಗಿಡದ ಬೇರು, ಕಾಂಡ ಮತ್ತು ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ಬಳಿಕ ಅದರ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ತಲೆನೋವು ಬೇಗ ವಾಸಿಯಾಗುತ್ತದೆ. ಜೊತೆಗೆ ಇದರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ.

Related Articles

Leave a Reply

Your email address will not be published. Required fields are marked *

Back to top button