ಗೃಹಲಕ್ಷ್ಮಿ ಯೋಜನೆ: 16 ಸಾವಿರ ಮಹಿಳೆಯರಿಗೆ GST ಶಾಕ್! ಇಲ್ಲಿದೆ ಸಂಪೂರ್ಣ ಮಾಹಿತಿ

(Gruhalakshmi Yojane) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ 16 ಸಾವಿರ ಮಹಿಳೆಯರಿಗೆ GST ಶಾಕ್ ನೀಡಿದ್ದು, ಈ ಕಾರಣದಿಂದ ಯೋಜನೆಯಿಂದ ವಂಚಿತರಾಗಿದ್ದಾರೆ.
ಹೌದು, ಯಜಮಾನಿಯ ಪತಿ ಹಾಗೂ ಮಕ್ಕಳು GST ಪಾವತಿದಾರ ಆಗಿರುವುದರಿಂದ ಯಜಮಾನಿ ಫಲಾನುಭವಿ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರ ಆದಾಯ ತೆರಿಗೆ ಇಲಾಖೆಗೆ ಸೂಚನೆ ನೀಡಿದ್ದು, ಹೀಗಾಗಿ ನಿಜವಾದ GST ಪಾವತಿದಾರರು ಯಾರು ಎಂಬುದನ್ನು ಪತ್ತೆ ಮಾಡಲು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ಸಾಲಕ್ಕೆ ಜಾಮೀನು ನೀಡಿದವರು GST ಪಾವತಿದಾರರ ಪಟ್ಟಿಗೆ:
ಬೆಳೆ ಸಾಲ ಹೊರತಾಗಿ ವೈಯಕ್ತಿಕ ಸಾಲ, ವಾಹನ ಸಾಲ ಇತರೆ ಕಾರಣಗಳಿಗೆ ಪಡಿತರ ಚೀಟಿ ಹೊಂದಿದ ವ್ಯಕ್ತಿ ರಾಷ್ಟ್ರೀಕೃತ ಅಥವಾ ಇತರೆ ಬ್ಯಾಂಕುಗಳಲ್ಲಿ ಸಾಲ ಪಡೆಯುತ್ತಾರೆ. ಈ ಸಾಲಕ್ಕೆ GST ಹಾಕಲಾಗುತ್ತದೆ. ವ್ಯಕ್ತಿಯ ಪಾನ್ ಕಾರ್ಡ್ ಸಂಖ್ಯೆ ಜೋಡಣೆಯಾಗಿರುತ್ತದೆ ಸಾಲ ಪಡೆದ ಕಾರಣಕ್ಕೆ ಪಡಿತರ ಚೀಟಿದಾರರು ಕೂಡ GST ಪಾವತಿದಾರರಾಗುತ್ತಿದ್ದಾರೆ ಸಾಲಕ್ಕೆ ಜಾಮೀನು ನೀಡಿದವರು ಪಡಿತರ ಚೀಟಿಯನ್ನು GST ಪಾವತಿದಾರ ಪಟ್ಟಿಗೆ ಸೇರ್ಪಡೆ ಮಾಡಲಾಗುತ್ತಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಮಾಡಿದ ಸಂದರ್ಭದಲ್ಲಿ ಪತಿ, ಮಕ್ಕಳು ಸಾಲ ಪಡೆದು GST ಪಾವತಿಸಿದ್ದರಿಂದ ಪಡಿತರ ಚೀಟಿ ಹೊಂದಿದ ಮನೆ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯ ನಗದು ಪಾವತಿಯಾಗುತ್ತಿಲ್ಲ ಯೋಜನೆಗೆ ಅರ್ಹರಾಗಿದ್ದರು ಹಣ ಸಿಗದಂತಾಗಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಜಿಲ್ಲೆಗಳಿಂದ ಮಾಹಿತಿ ನೀಡುವಂತೆ ಆದೇಶಿಸಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದರೂ GST ಪಾವತಿದಾರ ಎಂಬ ಮಾಹಿತಿ ತೋರಿಸುತ್ತಿರುವ ಪಡಿತರ ಕಾರ್ಡ್ ಮಾಹಿತಿಯನ್ನು ಆದಾಯ ತೆರಿಗೆ ಮತ್ತು ವಾಣಿಜ್ಯ ಇಲಾಖೆಗೆ ನೀಡಿ ಸತ್ಯಾಂಶ ತಿಳಿದು ಪ್ರಕ್ರಿಯೆ ಮುಂದುವರಿಸುವಂತೆ ತಿಳಿಸಲಾಗಿದೆ.