ರಿಲಾಯನ್ಸ್ ಫೌಂಡೇಶನ್ ವತಿಯಿಂದ ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ಸ್ಕಾಲರ್ ಶಿಪ್; ಕೂಡಲೇ ಅರ್ಜಿ ಸಲ್ಲಿಸಿ

(RF Scholarships) ಎಂಜಿನಿಯರಿಂಗ್, ಟೆಕ್ನಾಲಜಿ, ಎನರ್ಜಿ ಅಂಡ್ ಲೈಫ್-ಸೈನ್ಸಸ್ ಗಳಿಂದ ಆಯ್ದ ಫ್ಯೂಚರ್-ರೆಡಿ ಕೋರ್ಸ್ ಗಳನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2024-25 ನೇ ಸಾಲಿನ ರಿಲಾಯನ್ಸ್ ಫೌಂಡೇಶನ್ ಪೋಸ್ಟ್ಗ್ರಾಜುಯೇಟ್ ಸ್ಕಾಲರ್ಶಿಪ್ಸ್ ನೀಡುತ್ತಿದ್ದು, ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು, ಕೊನೆಯ ದಿನಾಂಕ ಯಾವಾಗ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ರಿಲಾಯನ್ಸ್ ಫೌಂಡೇಶನ್ ಪೋಸ್ಟ್ಗ್ರಾಜುಯೇಟ್ ಸ್ಕಾಲರ್ಶಿಪ್ಸ್, ಸಮಾಜದ ಒಳಿತಿಗಾಗಿ ವಿಶಾಲವಾಗಿ ಆಲೋಚಿಸುವ, ಪರಿಸರದ ಬಗ್ಗೆ ಕಾಳಜಿಯಿಂದ ಯೋಚಿಸುವ ಮತ್ತು ಡಿಜಿಟಲ್ ಕುರಿತು ಆಲೋಚಿಸುವಂತಹ ಭಾರತದ ಭವಿಷ್ಯದ ನಾಯಕರನ್ನು ಸಿದ್ಧಗೊಳಿಸುವ ಮತ್ತು ಮುನ್ನಡೆಸುವ ಗುರಿಯನ್ನು ಹೊಂದಿದೆ.
ಹಾಗಾದರೆ ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?:
- ಎಂಜಿನಿಯರಿಂಗ್, ಟೆಕ್ನಾಲಜಿ, ಎನರ್ಜಿ ಅಂಡ್ ಲೈಫ್-ಸೈನ್ಸಸ್ಗಳಿಂದ ಆಯ್ದ ಫ್ಯೂಚರ್-ರೆಡಿ ಕೋರ್ಸ್ ಗಳನ್ನು ಅಭ್ಯಾಸ ಮಾಡುತ್ತಿರುವ ಮೊದಲ ವರ್ಷದ ಪೂರ್ಣಾವಧಿಯ ನಿಯಮಿತ ಸ್ನಾತಕೋತ್ತರ ಕಾರ್ಯಕ್ರಮಗಳಿಗೆ ದಾಖಲಾಗಿರುವಂತಹ ವಿದ್ಯಾರ್ಥಿಗಳು.
- ಗೇಟ್ ಪರೀಕ್ಷೆಯಲ್ಲಿ 550-1000 ಗಳಿಸಿರಬೇಕು. ಅಥವಾ
- ತಮ್ಮ ಪದವಿಪೂರ್ವ ಸಿಜಿಪಿಎಯಲ್ಲಿ 7.5 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು (ಅಥವಾ ಸಿಜಿಪಿಎಗೆ ಸಾಮಾನ್ಯೀಕರಿಸಲಾದ %) (ವಿದ್ಯಾರ್ಥಿಗಳು ಗೇಟ್ ಪರೀಕ್ಷೆ ಬರೆದಿರದಿದ್ದರೆ).
- ಭಾರತದ ನಿವಾಸಿಯಾಗಿರುವ ನಾಗರಿಕರಿಗೆ ಲಭ್ಯವಿದೆ.
ಎಷ್ಟು ಸ್ಕಾಲರ್ ಶಿಪ್ ಲಭ್ಯ:
ಪದವಿಯ ಅವಧಿಯಲ್ಲಿ ರೂ. 6,00,000 ವರೆಗೆ
ಅರ್ಜಿ ಸಲ್ಲಿಕೆ ಹೇಗೆ?;
ಆಸಕ್ತ ಹಾಗೂ ಅರ್ಹ ವಿದ್ಯಾರ್ಥಿಗಳು www.b4s.in/nwmd/RFS10 ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?;
06-10-2024